ಆರೋಗ್ಯಕರ ಮತ್ತು ರುಚಿಕರವಾದ ಸ್ನ್ಯಾಕ್ ಹುಡುಕುತ್ತಿರುವವರಿಗಾಗಿ ರಾಜ್ಮಾ ಓಟ್ಸ್ ಪ್ಯಾಟೀಸ್ ಒಂದು ಅದ್ಭುತ ಆಯ್ಕೆ. ಪ್ರೋಟೀನ್ ಸಮೃದ್ಧ ರಾಜ್ಮಾ ಮತ್ತು ನ್ಯುಟ್ರಿಷಿಯನ್ ಭರಿತ ಓಟ್ಸ್‌ಗಳು ಸೇರಿ ಈ ಪ್ಯಾಟೀಸ್‌ಗಳನ್ನು ಆರೊಗ್ಯಪೂರ್ಣ ತಿಂಡಿಯಾಗಿ ಮಾಡುತ್ತವೆ.
ಬೇಕಾಗುವ ಪದಾರ್ಥಗಳು:
ಕಿಡ್ನಿ ಬೀನ್ಸ್ ಅಥವಾ ರಾಜ್ಮಾ – 250 ಗ್ರಾಂ
ಓಟ್ಸ್ – 100 ಗ್ರಾಂ
ವಾಲ್ನಟ್ಸ್ – 10
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – 2 ಚಿಟಿಕೆಗಳು.
ಹಸಿರು ಮೆಣಸಿನಕಾಯಿ – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ಈರುಳ್ಳಿ – 1 ಕತ್ತರಿಸಿದ
ಉಪ್ಪು – ರುಚಿಗೆ ತಕ್ಕಷ್ಟು
ಆಲಿವ್ ಎಣ್ಣೆ – 2-3 ಟೀಸ್ಪೂನ್
ಮಾಡುವ ವಿಧಾನ:
ಕಿಡ್ನಿ ಬೀನ್ಸ್ ಅನ್ನು ಸುಮಾರು 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ನಂತರ ಪ್ರೆಶರ್ ಕುಕ್ಕರ್‌ನಲ್ಲಿ ನೀರು ಸೇರಿಸಿ 4 ಸೀಟಿ ಕೂಗಿಸಿ.
ಪ್ರೊಸೆಸರ್‌ನಲ್ಲಿ ಓಟ್ಸ್, ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಅರಿಶಿನ, ಉಪ್ಪು, ವಾಲ್ನಟ್ಸ್ ಸೇರಿಸಿ ಪುಡಿ ಮಾಡಿ.
ಬೀನ್ಸ್ ತಣ್ಣಗಾದ ನಂತರ, ನೀರು ಸೇರಿಸದೆ ರುಬ್ಬಿಕೊಳ್ಳಿ. ಇದರ ಜೊತೆಗೆ ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಒಟ್ಟಿಗೆ ಸೇರಿಸಿ ಪೇಸ್ಟ್ ಮಾಡಿ.
ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ಓಟ್ಸ್ ಪುಡಿ ಮಿಶ್ರಣ, ರುಬ್ಬಿದ ಕಿಡ್ನಿ ಬೀನ್ಸ್ ಮಿಶ್ರಣ ಸೇರಿಸಿ. ಜೊತೆಗೆ 1 ಚಮಚ ಎಣ್ಣೆಯನ್ನು ಸೇರಿಸಿ ಪ್ಯಾಟಿ ಹಿಟ್ಟನ್ನು ತಯಾರಿಸಿ ಬೇಕಾದ ಆಕಾರಕ್ಕೆ ಮಾಡಿಕೊಂಡು ಅವುಗಳನ್ನು ಬೇಕಿಂಗ್ ಟ್ರೇ ಮೇಲೆ ಇರಿಸಿ 25-30 ನಿಮಿಷಗಳ ಕಾಲ ಬೇಯಿಸಿದರೆ ರಾಜ್ಮಾ ಓಟ್ಸ್ ಪ್ಯಾಟೀಸ್ ರೆಡಿ.