ಮೊಟ್ಟೆಯಿಂದ ಹಲವು ಬಗೆಯ ಖಾದ್ಯಗಳನ್ನು ಬಹಳ ಬೇಗನೆ ತಯಾರಿಸಬಹುದು. ಇವತ್ತು ಪೋಷಕಾಂಶಗಳು ಮತ್ತು ಪ್ರೋಟೀನ್ ಭರಿತವಾದ ಎಗ್ ರೋಸ್ಟ್ ಮಾಡೋದು ಹೇಗೆ ಎಂದು ನೋಡೋಣ.
ಬೇಕಾಗುವ ಪದಾರ್ಥಗಳು
ಬೇಯಿಸಿದ ಮೊಟ್ಟೆ- ನಾಲ್ಕು,
ಚೀಸ್- ಕಾಲು ಕಪ್,
ಕರಿಮೆಣಸು ಪೇಸ್ಟ್- ಒಂದೂವರೆ ಚಮಚ,
ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ,
ಉಪ್ಪು- ರುಚಿಗೆ ತಕ್ಕಷ್ಟು,
ಕಾಳುಮೆಣಸಿನ ಪುಡಿ – ಅರ್ಧ ಟೀ ಚಮಚ,
ಮೆಣಸಿನ ಪುಡಿ – ಅರ್ಧ ಟೀ ಚಮಚ,
ಅರಿಶಿನ ಪುಡಿ- ಕಾಲು ಟೀ ಚಮಚ,
ಚಾಟ್ ಮಸಾಲ- ಅರ್ಧ ಟೀ ಚಮಚ,
ಗರಂ ಮಸಾಲಾ ಪುಡಿ- ಅರ್ಧ ಟೀ ಚಮಚ,
ಜೀರಿಗೆ ಪುಡಿ- ಅರ್ಧ ಟೀ ಚಮಚ,
ಕಡಲೆ ಹಿಟ್ಟು- ಒಂದು ಟೀ ಚಮಚ,
ಮೊಸರು- ಎರಡು ಟೀ ಚಮಚ,
ಬೆಣ್ಣೆ- ಒಂದು ಟೀ ಚಮಚ,
ನಿಂಬೆ ರಸ- ಅರ್ಧ ಟೀ ಚಮಚ,
ಕೊತ್ತಂಬರಿ ಸೊಪ್ಪು- ಒಂದು ಟೀ ಚಮಚ.
ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ಕರಿಮೆಣಸು ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸಿನ ಪುಡಿ, ಮೆಣಸಿನ ಪುಡಿ, ಅರಿಶಿನ, ಚಾಟ್ ಮಸಾಲ, ಗರಂ ಮಸಾಲಾ ಪುಡಿ, ಜೀರಿಗೆ ಪುಡಿ, ಕಡಲೆಹಿಟ್ಟು, ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಬೇಯಿಸಿರುವ 4 ಮೊಟ್ಟೆಗಳನ್ನು ಚಾಕುವಿನಿಂದ ಉದ್ದವಾಗಿ ಕತ್ತರಿಸಿ ಈ ಮೊಟ್ಟೆಗಳನ್ನು ಕರಿಮೆಣಸು ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಮ್ಯಾರಿನೇಟ್ ಮಾಡಿ ಅರ್ಧ ಘಂಟೆ ಇಡಿ. ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಡಿ. ಅದರ ಮೇಲೆ ಬೆಣ್ಣೆ ಹಾಕಿ ಮ್ಯಾರಿನೇಟ್ ಮಾಡಿದ ಮೊಟ್ಟೆಗಳನ್ನು ಕತ್ತರಿಸಿ ಸೇರಿಸಿ. ಮೇಲೆ ಮತ್ತೆ ಸ್ವಲ್ಪ ಬೆಣ್ಣೆಯನ್ನು ಹಾಕಿ. ಕಡಿಮೆ ಉರಿಯಲ್ಲಿ 2 ರಿಂದ 3 ನಿಮಿಷ ಬೇಯಿಸಿ. ನಂತರ ಮೊಟ್ಟೆಯನ್ನು ತಿರುಗಿಸಿ, ಸ್ವಲ್ಪ ಬೆಣ್ಣೆ ಸೇರಿಸಿ. ಇನ್ನೊಂದು ಬದಿಯಲ್ಲಿ 2-3 ನಿಮಿಷ ಬೇಯಿಸಿ. ಕೊನೆಗೆ ಮೊಟ್ಟೆಯ ಮೇಲೆ ಚೀಸ್ ಸ್ಲೈಸ್ ಇರಿಸಿದರೆ ಎಗ್ ರೋಸ್ಟ್ ರೆಡಿ.