ಬಿಸಿಬಿಸಿ ಸಮೋಸಾಗೆ ಚಾಟ್‌ದ ಫ್ಲೇವರ್ ಸೇರಿದಾಗ ಬಾಯಲ್ಲಿ ನೀರೂರಿಸುವ ಅದ್ಭುತ ರುಚಿ ಸಿದ್ಧವಾಗುತ್ತದೆ. ಮನೆಲ್ಲೇ ತುಂಬಾ ಸಿಂಪಲ್ ಸಾಮಗ್ರಿಗಳಿಂದ ತಯಾರಿಸಬಹುದಾದ ಈ ಸಮೋಸಾ ಚಾಟ್ ಸ್ನ್ಯಾಕ್ಸ್‌ಗೆ ಸೂಕ್ತ.
ಬೇಕಾಗುವ ಸಾಮಗ್ರಿಗಳು:
ಸಮೋಸಾ – 2
ಬೇಯಿಸಿದ ಕಾಬುಲ್ ಕಡಲೆ – ½ ಕಪ್
ಈರುಳ್ಳಿ – 1
ಟೊಮೇಟೋ – 1
ಗ್ರೀನ್ ಚಟ್ನಿ – 2 ಚಮಚ
ಹುಣಸೆ ಚಟ್ನಿ – 2 ಚಮಚ
ಮೊಸರು – 3 ಚಮಚ
ಸೇವ್ – ½ ಕಪ್
ಕೊತ್ತಂಬರಿ – ಸ್ವಲ್ಪ
ಚಾಟ್ ಮಸಾಲಾ – ½ ಚಮಚ
ಉಪ್ಪು – ರುಚಿಗೆ
ತಯಾರಿಸುವ ವಿಧಾನ:
ಮೊದಲು ತಟ್ಟೆಯಲ್ಲಿ ಸಮೋಸಾವನ್ನು ತುಂಡು ಮಾಡಿ ಹಾಕಿ. ಮೇಲೆ ಬೇಯಿಸಿದ ಕಡ್ಲೆ, ಈರುಳ್ಳಿ, ಟೊಮೇಟೋ ಹಾಕಿ. ಅದರ ಮೇಲೆ ಗ್ರೀನ್ ಚಟ್ನಿ, ಹುಣಸೆ ಚಟ್ನಿ ಮತ್ತು ಮೊಸರು ಹಾಕಿ. ಈಗ ಚಾಟ್ ಮಸಾಲಾ ಮತ್ತು ಸ್ವಲ್ಪ ಉಪ್ಪು ಸೇರಿಸಿ. ಕೊನೆಯಲ್ಲಿ ಸೇವ್ ಮತ್ತು ಕೊತ್ತಂಬರಿ ಹಾಕಿ ತಕ್ಷಣ ಸರ್ವ್ ಮಾಡಿ.

