ಹಲಸಿನ ಹಣ್ಣಿನ ಸೀಸನ್ ನಲ್ಲಿ ಹಳ್ಳಿ ಮನೆಗಳಲ್ಲಿ, ಹಲಸಿನ ಹಣ್ಣಿನ ದೋಸೆ ಮಾಮೂಲಾಗಿ ಇರತ್ತೆ. ಬೆಳ್ಳಿಗ್ಗೆ ತಟ್ಟೆ ಮೇಲೆ ಬಿಸಿ ಬಿಸಿಯಾದ ಸಿಹಿ ದೋಸೆ ಅದರ ಮೇಲೆ ಸ್ವಲ್ಪ ತುಪ್ಪ ಆಹಾ! ಅದೇನು ರುಚಿ…. ಬೆಳಗಿನ ಉಪಾಹಾರಕ್ಕೂ ಅಥವಾ ಸಾಯಂಕಾಲದ ಸ್ನ್ಯಾಕ್ಗೂ ಇದೊಂದು ಅದ್ಭುತ ಆಯ್ಕೆ!
ಬೇಕಾಗುವ ಪದಾರ್ಥಗಳು:
ಅಕ್ಕಿ – 1 ಕಪ್
ಹಲಸಿನ ಹಣ್ಣು – 1 ಕಪ್
ಬೆಲ್ಲ – ½ ಕಪ್ (ಸ್ವಾದಾನುಸಾರವಾಗಿ)
ತುರಿದ ಕೊಬ್ಬರಿ – ½ ಕಪ್
ಎಳ್ಳು – 1 ಟೀ ಸ್ಪೂನ್
ಏಲಕ್ಕಿ ಪುಡಿ – ¼ ಟೀ ಸ್ಪೂನ್
ಉಪ್ಪು – ಚಿಕ್ಕ ಚಿಟಿಕೆ
ನೀರು – ಅಗತ್ಯವಿದ್ದಷ್ಟು
ತುಪ್ಪ/ಎಣ್ಣೆ – ದೋಸೆ ಹಾಕಲು
ತಯಾರಿಸುವ ವಿಧಾನ:
ಅಕ್ಕಿಯನ್ನು ತೊಳೆದು ಕನಿಷ್ಠ 4 ಗಂಟೆಗಳ ಕಾಲ ನೆನೆಸಿಡಿ. ನಂತರ ಅದನ್ನು ಹಲಸಿನ ಹಣ್ಣು, ಬೆಲ್ಲ, ತುರಿದ ಕೊಬ್ಬರಿ, ಎಳ್ಳು ಪುಡಿ, ಏಲಕ್ಕಿ ಪುಡಿ, ಚಿಟಿಕೆ ಉಪ್ಪು ಹಾಕಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ. ಗಟ್ಟಿಯಾದ ನಯವಾದ ಮಿಶ್ರಣ ಬೇಕು (ದೋಸೆ ಹಾಕುವಷ್ಟು ಗಟ್ಟಿ).
ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ, ಮಿಶ್ರಣ ತಯಾರಿಸಿಕೊಳ್ಳಿ. ಈಗ ಈಗ ಕಾವಲಿ ಚನ್ನಾಗಿ ಬಿಸಿ ಮಾಡಿ, ತುಪ್ಪ ಹಾಕಿ ದೋಸೆ ಹಾಕಿ ಮಧ್ಯಮ ಉರಿಯಲ್ಲಿ ಕ್ರಿಸ್ಪಿ ಆಗುವವರೆಗೆ ಕಾಯಿಸಿದರೆ ಬಿಸಿ ಬಿಸಿ ಹಲಸಿನ ಹಣ್ಣಿನ ದೋಸೆ ರೆಡಿ.