ಸಂಜೆ ಹೊತ್ತು ಏನಾದರೂ ಬಿಸಿ ಬಿಸಿ ತಿಂಡಿಯನ್ನು ತಿನ್ನಬೇಕು ಅನ್ನಿಸೋದು ಸಹಜ. ಹೆಚ್ಚಾಗಿ ಬಜ್ಜಿ ಅಥವಾ ಬೋಂಡಾ ಬೇಕೆಂದು ಅನಿಸುವ ಬಹುಪಾಲು ಜನರಿಗೆ ಇದೀಗ ಹೊಸ ರುಚಿಯಾಗಿ ಕಚೋರಿ ಸವಿಯಲು ಅವಕಾಶವಿದೆ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಈ ತಿಂಡಿ ಎಲ್ಲರಿಗು ಇಷ್ಟವಾಗುತ್ತೆ.
ಬೇಕಾಗುವ ಪದಾರ್ಥಗಳು:
ಮೈದಾಹಿಟ್ಟು – 2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಅಜ್ವಾನ – ಅರ್ಧ ಚಮಚ
ಅಡುಗೆ ಎಣ್ಣೆ- ಅರ್ಧ ಕಪ್
ದನಿಯಾ – 1 ಚಮಚ
ಜೀರಿಗೆ – 1 ಚಮಚ
ಸೋಂಪು – 1 ಚಮಚ
ಈರುಳ್ಳಿ – 3
ಹಸಿಮೆಣಸು – 2
ಕಡಲೆಹಿಟ್ಟು – 2 ಚಮಚ
ಖಾರದ ಪುಡಿ – 1 ಚಮಚ
ಗರಂಮಸಾಲೆ – ಅರ್ಧ ಚಮಚ
ಕಾಳುಮೆಣಸಿನ ಪುಡಿ – ಅರ್ಧ ಚಮಚ
ಅರಿಸಿಣ ಪುಡಿ – ಚಿಟಿಕೆ
ಆಲೂಗೆಡ್ಡೆ – 3 (ಬೇಯಿಸಿದ್ದು)
ಕೊತ್ತಂಬರಿ ಸೊಪ್ಪು – ಸ್ವಲ್ಪ
ಸಕ್ಕರೆ- 1 ಚಮಚ
ಮಾಡುವ ವಿಧಾನ:
ಮೊದಲು ಮೈದಾ ಹಿಟ್ಟು 2 ಕಪ್, ಅರ್ಧ ಚಮಚ ಅಜ್ವಾನ, ಅರ್ಧ ಕಪ್ ಅಡುಗೆ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಬೇಕು. ಈ ಹಿಟ್ಟನ್ನು 20 ನಿಮಿಷ ಹಾಗೆ ಇಡಿ.
ಈಗ ದನಿಯಾ, ಜೀರಿಗೆ ಮತ್ತು ಸೋಂಪು ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಹುರಿದು ಪುಡಿ ಮಾಡಿಕೊಳ್ಳಬೇಕು. ನಂತರ ಈರುಳ್ಳಿ, ಎರಡು ಹಸಿಮೆಣಸು, ಅರ್ಧ ಚಮಚ ಗರಂ ಮಸಾಲೆ, ಅರ್ಧ ಚಮಚ ಕಾಳುಮೆಣಸಿನ ಪುಡಿ, ಚಿಟಿಕೆ ಅರಿಶಿಣ, ಸ್ವಲ್ಪ ಇಂಗು ಮತ್ತು ಎರಡು ಚಮಚ ಕಡಲೆಹಿಟ್ಟು ಎಲ್ಲವನ್ನು ಮಿಶ್ರಣ ಮಾಡಿ ಇದರ ಜೊತೆಗೆ ದನಿಯಾ, ಜೀರಿಗೆ ಮತ್ತು ಸೋಂಪು ಪುಡಿಯನ್ನು ಮಿಶ್ರಣ ಮಾಡಿ. ಈ ಮಿಶ್ರಣದಲ್ಲಿ ಬೇಯಿಸಿ ಬೇಯಿಸಿದ ಆಲೂಗೆಡ್ಡೆ, ಸಕ್ಕರೆ ಒಂದು ಚಮಚ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಸಣ್ಣ ಉಂಡೆ ತಯಾರಿಸಿಕೊಳ್ಳಿ.
ಈಗ ಹಿಟ್ಟಿನಿಂದ ಉಂಡೆ ಮಾಡಿಕೊಳ್ಳಿ. ಪ್ರತಿ ಉಂಡೆಯನ್ನು ಚಪಾತಿ ತರಹ ತಟ್ಟಿದ ನಂತರ, ಅದರೊಳಗೆ ತಯಾರಿಸಿದ ವಿಶ್ರಣವನ್ನು ಹಾಕಿ ಮುಚ್ಚಿ ಲಟ್ಟಿಸಿಕೊಳ್ಳಿ. ನಂತರ ಇದನ್ನು ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿದರೆ ಕಚೋರಿ ರೆಡಿ.