ಮಧ್ಯಾಹ್ನಕ್ಕೆ ಅನ್ನ ಸಾಂಬಾರ್ ತಿಂದು ಬೇಜಾರಾಗಿದ್ಯಾ? ಹಾಗಿದ್ರೆ ಒನ್ ಪಾಟ್ ರೈಸ್ ಮೀಲ್ ಈ ಮಸಾಲ ರೈಸ್ ಒಂದು ಅತ್ಯುತ್ತಮ ಆಯ್ಕೆ. ಇದನ್ನು ಕೇವಲ 10 ನಿಮಿಷದಲ್ಲಿ ತಯಾರಿಸಬಹುದು ಮತ್ತು ರುಚಿಯಲ್ಲಿ ವಿಭಿನ್ನವಾಗಿದ್ದು ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ.
ಬೇಕಾಗುವ ಸಾಮಾಗ್ರಿಗಳು:
ಅನ್ನ – 2 ಕಪ್
ಹಸಿಮೆಣಸಿನಕಾಯಿ – 2
ಈರುಳ್ಳಿ – ಅರ್ಧ ಕಪ್
ಟೊಮಾಟೊ – ಅರ್ಧ ಕಪ್
ಬೀನ್ಸ್ – ಕಾಲು ಕಪ್
ಹಸಿ ಬಟಾಣಿ – ಕಾಲು ಕಪ್
ಕ್ಯಾರೆಟ್ – ಕಾಲು ಕಪ್
ದಪ್ಪ ಮೆಣಸಿನಕಾಯಿ – 1 ಕಪ್
ಧನಿಯಾ ಪುಡಿ – 1 ಚಮಚ
ಅರಿಶಿಣ – ಕಾಲು ಚಮಚ
ಗರಂ ಮಸಾಲ – 1 ಚಮಚ
ಅಡುಗೆ ಎಣ್ಣೆ – 2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಖಾರದ ಪುಡಿ – 1 ಚಮಚ
ತಯಾರಿಸುವ ವಿಧಾನ:
ಮೊದಲಿಗೆ ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆ ಹಾಕಿ, ಎಣ್ಣೆ ಕಾದ ಮೇಲೆ ಕಟ್ ಮಾಡಿದ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಬರುವವರೆಗೆ ಬಾಡಿಸಿ, ಅದಕ್ಕೆ ಟೊಮಾಟೊ ಸೇರಿಸಿ ಚೆನ್ನಾಗಿ ಹುರಿಯಿರಿ. ಟೊಮಾಟೊ ಬೆಂದ ಮೇಲೆ ಕ್ಯಾರೆಟ್, ಬೀನ್ಸ್, ದಪ್ಪ ಮೆಣಸಿನಕಾಯಿ, ಹಸಿ ಬಟಾಣಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಮಧ್ಯಮ ಉರಿಯಲ್ಲಿ ಪ್ಯಾನ್ ಮುಚ್ಚಿ 5 ನಿಮಿಷ ಬೇಯಿಸಿ. ತರಕಾರಿ ಬೆಂದ ನಂತರ, ಖಾರದ ಪುಡಿ, ಧನಿಯಾ ಪುಡಿ, ಅರಿಶಿಣ ಮತ್ತು ಗರಂ ಮಸಾಲ ಹಾಕಿ ಮಿಕ್ಸ್ ಮಾಡಿ, ಕಡಿಮೆ ಉರಿಯಲ್ಲಿ ಬೇಯಿಸಿರಿ. ನಂತರ ಅದಕ್ಕೆ ಅನ್ನ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಿಧಾನವಾಗಿ ಮಿಕ್ಸ್ ಮಾಡಿ. 2 ನಿಮಿಷಗಳ ಕಾಲ ಮುಚ್ಚುಳ ಮುಚ್ಚಿ ಬೇಯಿಸಿ. ಬಿಸಿ ಬಿಸಿ ಮಸಾಲ ರೈಸ್ ಸರ್ವ್ ಮಾಡಿರಿ.