ಕ್ಯಾರೆಟ್ ರೈಸ್ ಬಾತ್ ಒಂದು ಸುಲಭ ಮತ್ತು ಆರೋಗ್ಯಕರ ಆಹಾರ. ಇದರ ರುಚಿ ಮಾತ್ರವಲ್ಲ, ಕ್ಯಾರೆಟ್ ನಲ್ಲಿ ಇರುವ ವಿಟಮಿನ್ ಎ, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳ ಕಾರಣದಿಂದ ಆರೋಗ್ಯಕ್ಕೂ ತುಂಬಾ ಒಳ್ಳೆದು. ಮಕ್ಕಳಿಂದ ಹಿರಿಯರ ತನಕ ಎಲ್ಲರಿಗೂ ಇಷ್ಟವಾಗುವ ಈ ಬಾತ್‌ನ್ನು ಬೆಳಗ್ಗೆ ತಿಂಡಿ ಅಥವಾ ಲಂಚ್‌ಗೆ ತಯಾರಿಸಬಹುದು.
ಅವಶ್ಯಕ ಪದಾರ್ಥಗಳು:
ಅನ್ನ – 1 ಕಪ್
ಕ್ಯಾರಟ್ – 2 (ಸಣ್ಣದಾಗಿ ತುರಿದದ್ದು)
ಎಣ್ಣೆ – 2 ಟೀಚಮಚ
ಸಾಸಿವೆ – ½ ಟೀಚಮಚ
ಜೀರಿಗೆ – ½ ಟೀಚಮಚ
ಉದ್ದಿನಬೇಳೆ – 1 ಟೀಚಮಚ
ಶೇಂಗಾ – 1 ಟೇಬಲ್ ಚಮಚ
ಹಸಿಮೆಣಸು – 2 (ಚೂರು ಮಾಡಿದದು)
ಕರಿಬೇವು – 6-8 ಎಲೆಗಳು
ಎಳ್ಳು ಪುಡಿ – 1 ಟೀಚಮಚ (ಐಚ್ಛಿಕ)
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ತಯಾರಿ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಶೇಂಗಾ ಹಾಕಿ ಸ್ವಲ್ಪ ಹುರಿಯಿರಿ. ಈಗ ಹಸಿಮೆಣಸು, ಕರಿಬೇವು ಹಾಕಿ. ಜೊತೆಗೆ ತುರಿದ ಕ್ಯಾರಟ್, ಹಾಗೂ ಉಪ್ಪು ಸೇರಿಸಿ 3–4 ನಿಮಿಷ ಚೆನ್ನಾಗಿ ಬೇಯಿಸಿ. ನಂತರ ಅನ್ನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೇಕಿದ್ದರೆ ಎಳ್ಳು ಪುಡಿ ಹಾಕಿ ಕೊನೆಗೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ಕ್ಯಾರೆಟ್ ರೈಸ್ ಬಾತ್ ರೆಡಿ.