FOOD | ಆರೋಗ್ಯಕರ ಬ್ರೇಕ್ ಫಾಸ್ಟ್ ಬೇಕು ಅಂದ್ರೆ ಈ ಚಿಯಾ ಪುಡಿಂಗ್ ಟ್ರೈ ಮಾಡಿ!

ಆರೋಗ್ಯಕರ ಬ್ರೇಕ್ ಫಾಸ್ಟ್ ಬೇಕು ಅಂದ್ರೆ ಈ ಚಿಯಾ ಪುಡಿಂಗ್ ಟ್ರೈ ಮಾಡಿ!

ಚಿಯಾ ಪುಡಿಂಗ್ ರೆಸಿಪಿಯು ಬೆಳಗಿನ ಉಪಾಹಾರಕ್ಕೆ ಅಥವಾ ಮಧ್ಯಾಹ್ನದ ಲಘು ಆಹಾರಕ್ಕೆ ಉತ್ತಮ ಆಯ್ಕೆ. ಚಿಯಾ ಬೀಜಗಳಲ್ಲಿ ಫೈಬರ್, ಒಮೆಗಾ-3, ಪ್ರೋಟೀನ್ ಇತ್ಯಾದಿ ಪೋಷಕಾಂಶಗಳು ಸಮೃದ್ಧವಾಗಿ ಲಭ್ಯವಿರುವುದರಿಂದ ಇದು ಆರೋಗ್ಯಕ್ಕೆ ತುಂಬಾ ಲಾಭದಾಯಕ.

ಬೇಕಾಗುವ ಪದಾರ್ಥಗಳು:

ಚಿಯಾ ಬೀಜಗಳು – 3 ಟೀ ಸ್ಪೂನ್
ಹಾಲು (ಅಥವಾ ಬಾದಾಮಿ ಹಾಲು) – 1 ಕಪ್
ಜೇನುತುಪ್ಪ / ಮೇಪಲ್ ಸಿರಪ್ / ಖರ್ಜೂರ/ ಬೆಲ್ಲ – 1 ಟೀ ಸ್ಪೂನ್ (ಐಚ್ಛಿಕ)
ವನಿಲ್ಲಾ ಎಸೆನ್ಸ್ – 2 ಹನಿ (ಐಚ್ಛಿಕ)
ಹಣ್ಣಿನ ತುಂಡುಗಳು (ಬಾಳೆಹಣ್ಣು, ಸ್ಟ್ರಾಬೆರಿ, ಮಾವು) – ಆಯ್ಕೆಮಾಡಿಕೊಳ್ಳಿ
ಒಣಹಣ್ಣುಗಳು / ಬೀಜಗಳು – ಟಾಪಿಂಗ್‌ಗಾಗಿ

ತಯಾರಿಸುವ ವಿಧಾನ:

ಒಂದು ಬಟ್ಟಲಲ್ಲಿ ಹಾಲು ಹಾಕಿ, ಅದಕ್ಕೆ ಚಿಯಾ ಬೀಜಗಳನ್ನು ಸೇರಿಸಿ. ಜೇನುತುಪ್ಪ ಮತ್ತು ವನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಫ್ರಿಡ್ಜಿನಲ್ಲಿ ಕನಿಷ್ಠ 4-5 ಗಂಟೆಗಳವರೆಗೆ ಅಥವಾ ಇಡೀ ರಾತ್ರಿ ಇಡಿ. ಬೀಜಗಳು ಹಾಲು ಹೀರಿಕೊಂಡು ಜೆಲ್ಲಿ ಮಾದರಿಯಲ್ಲಿ ತಯಾರಾಗುತ್ತವೆ.

ಮರುದಿನ ಬೆಳಗ್ಗೆ ತಯಾರಾದ ಚಿಯಾ ಪುಡಿಂಗ್ ಮೇಲೆ ಹಣ್ಣಿನ ತುಂಡುಗಳು ಮತ್ತು ಒಣಹಣ್ಣುಗಳನ್ನು ಹಾಕಿ ಸವಿಯಿರಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!