FOOD | ಬ್ರೇಕ್ ಫಾಸ್ಟ್ ಟೇಸ್ಟಿನೂ ಆಗಿರ್ಬೇಕು, ಪ್ರೋಟೀನೂ ಸಿಗ್ಬೇಕು ಅಂದ್ರೆ ಈ ಪೆಸರಟ್ಟು ಟ್ರೈ ಮಾಡಿ

ನಿಮ್ಮ ಬೆಳಗಿನ ತಿಂಡಿಗೆ ಬಿಸಿ ಬಿಸಿಯಾಗಿ, ತೂಕ ಇಳಿಸೋಕು ಉಪಯೋಗವಾಗೋದು, ಹಾಗು ರುಚಿಕರವೂ ಆಗಿರೋ ತಿಂಡಿ ಬೇಕಾ? ಹಾಗಾದ್ರೆ, ಈ ‘ಹೆಸರು ಕಾಳಿನ ದೋಸೆ’ ಅಂದರೆ ಪೆಸರಟ್ಟು ಟ್ರೈ ಮಾಡ್ಲೇಬೇಕು.

ಅವಶ್ಯಕ ಪದಾರ್ಥಗಳು:

ಮೂಂಗ್ ದಾಲ್ ( ಹೆಸರು) – 1 ಕಪ್ (ರಾತ್ರಿ ನೆನೆಸಿದ್ದು)
ಹಸಿಮೆಣಸು – 2
ಶುಂಠಿ – 1 ಇಂಚು ತುಂಡು
ಜೀರಿಗೆ – 1 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಬೇಕಾದಷ್ಟು
ಎಣ್ಣೆ – ಸ್ವಲ್ಪ

ಮಾಡುವ ವಿಧಾನ:

ಮೊದಲಿಗೆ ನೆನೆಸಿದ ಮೂಂಗ್ ದಾಲ್, ಹಸಿಮೆಣಸು, ಶುಂಠಿ, ಜೀರಿಗೆ, ಕೊತ್ತಂಬರಿಸೊಪ್ಪನ್ನು ಮಿಕ್ಸರ್‌ಜಾರ್‌ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ, ದೋಸೆ ಹಿಟ್ಟಿನಷ್ಟು ನುಣ್ಣಗೆ ಅರೆದುಕೊಳ್ಳಿ.

ಆ ಹಿಟ್ಟಿಗೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈಗ ತವದ ಮೇಲೆ ಸ್ವಲ್ಪ ಎಣ್ಣೆ ಹಾಕಿ, ದೋಸೆ ಹರಡಿ ಎರಡು ಬದಿ ಚೆನ್ನಾಗಿ ಬೇಯಿಸಿದರೆ ಪೆಸರಟ್ಟು ರೆಡಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!