ಕ್ರಿಸ್ಪಿ ಪಾಪಡ್ ಮೇಲೆ ರುಚಿಕರವಾದ ತರಕಾರಿ ಮಿಶ್ರಣ ಹಾಕಿ ತಯಾರಿಸಲಾಗುವ ಒಂದು ಸುಲಭವಾದ ಹಾಗೂ ತಕ್ಷಣ ತಿನ್ನಬಹುದಾದ ಸ್ನ್ಯಾಕ್ ಈ ಮಸಾಲಾ ಪಾಪಡ್. ಮಳೆಗಾಲ, ಸಾಯಂಕಾಲದ ಸಮಯದಲ್ಲಿ ಮಸಾಲಾ ಪಾಪಡ್ ಬೆಸ್ಟ್ ಆಯ್ಕೆ.
ಬೇಕಾಗುವ ಸಾಮಗ್ರಿಗಳು:
ಪಾಪಡ್ / ಹಪ್ಪಳ – 2
ಟೊಮೇಟೋ – 1 (ಸಣ್ಣ ತುಂಡು ಮಾಡಿ)
ಈರುಳ್ಳಿ – 1
ಹಸಿಮೆಣಸು – 1
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ನಿಂಬೆ ಹಣ್ಣಿನ ರಸ – 1 ಟೀ ಸ್ಪೂನ್
ಚಾಟ್ ಮಸಾಲಾ – 1/2 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಪಾಪಡ್ ಫ್ರೈ ಮಾಡಲು (ಐಚ್ಛಿಕ)
ಮಾಡುವ ವಿಧಾನ:
ಪಾಪಡ್ ಅನ್ನು ಎಣ್ಣೆಯಲ್ಲಿ ಲೈಟ್ ಫ್ರೈ ಮಾಡಬಹುದು ಅಥವಾ ನಾನ್‌ಸ್ಟಿಕ್ ತವೆಯ ಮೇಲೆ ಅಥವಾ ಕೆಂಡದಲ್ಲಿ ಸುಡಬಹುದು.
ಈಗ ಒಂದು ಬಟ್ಟಲಿನಲ್ಲಿ ಕತ್ತರಿಸಿದ ಟೊಮೇಟೋ, ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೇರಿಸಿ. ಅದಕ್ಕೆ ನಿಂಬೆರಸ, ಚಾಟ್ ಮಸಾಲಾ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತಯಾರಿಸಿದ
ಈ ಮಸಾಲಾ ಮಿಶ್ರಣವನ್ನು ಹುರಿದ ಪಾಪಡ್ ಮೇಲೆ ಹರಡಿದರೆ ಮಸಾಲಾ ಪಾಪಡ್ ರೆಡಿ. ಮಸಾಲೆ ಹಾಕಿದ ತಕ್ಷಣವೇ ತಿನ್ನುವುದು ಉತ್ತಮ.