FOOD | ಬ್ರೇಕ್ ಫಾಸ್ಟ್ ಗೆ ಬೇಗ ತಯಾರಾಗೋ ತಿಂಡಿ ಬೇಕು ಅಂದ್ರೆ ಅವಲಕ್ಕಿ ಉಪ್ಪಿಟ್ಟು ಟ್ರೈ ಮಾಡಿ

ಅವಲಕ್ಕಿ ಉಪ್ಪಿಟ್ಟು, ಅಥವಾ ಪೋಹಾ, ಕರ್ನಾಟಕದಲ್ಲಿ ಬಹುಪಾಲು ಮನೆಗಳಲ್ಲಿ ತಯಾರಾಗುವ ಸರಳ ಮತ್ತು ರುಚಿಕರವಾದ ಬೆಳಗಿನ ಉಪಹಾರವಾಗಿದೆ. ಇದು ಕಡಿಮೆ ಸಮಯದಲ್ಲಿ ತಯಾರಾಗುತ್ತದೆಯಲ್ಲದೆ, ಪೋಷಕಾಂಶಗಳಲ್ಲೂ ಸಮೃದ್ಧವಾಗಿದೆ. ರಾತ್ರಿಯ ಲಘು ಊಟಕ್ಕೂ ಇದು ಒಳ್ಳೆಯ ಆಯ್ಕೆ.

ಬೇಕಾಗುವ ಪದಾರ್ಥಗಳು:

ದಪ್ಪ ಅವಲಕ್ಕಿ – 1 ಕಪ್
ಎಣ್ಣೆ – 2 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಜೀರಿಗೆ – ¼ ಟೀ ಸ್ಪೂನ್
ಹಸಿಮೆಣಸು – 2
ಕರಿಬೇವು – 6-8 ಎಲೆ
ಕಡಲೆಬೇಳೆ – 1 ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಲಿಂಬೆ ರಸ – 1 ಟೀ ಸ್ಪೂನ್
ಸಕ್ಕರೆ – ½ ಟೀ ಸ್ಪೂನ್
ತುಪ್ಪ – 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಮೊದಲು ಅವಲಕ್ಕಿಯನ್ನು ಚೆನ್ನಾಗಿ ತೊಳೆದು, 10 ನಿಮಿಷ ನೀರಿನಲ್ಲಿ ನೆನೆಸಿಡಿ. ನಂತರ ನೀರನ್ನು ತೆಗೆದುಕೊಳ್ಳಿ.

ಒಂದು ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಮೆಣಸು, ಸಾಸಿವೆ, ಜೀರಿಗೆ, ಕಡಲೆಬೇಳೆ ಮತ್ತು ಉದ್ದಿನ ಬೇಳೆ, ಕರಿಬೇವು, ಹಸಿಮೆಣಸು ಸೇರಿಸಿ ಸ್ವಲ್ಪ ಸಮಯ ಹುರಿಯಿರಿ. ಈಗ ಒಗ್ಗರಣೆಗೆ ನೆನೆಸಿದ ಅವಲಕ್ಕಿ,ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಲಿಂಬೆರಸ ಹಾಕಿ ಚೆನ್ನಾಗಿ ಕಲಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಮತ್ತು ತುಪ್ಪ ಹಾಕಿ ಮಿಶ್ರಣ ಮಾಡಿದರೆ ಅವಲಕ್ಕಿ ಉಪ್ಪಿಟ್ಟು ರೆಡಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!