ಬೇಕಾಗುವ ಸಾಮಾಗ್ರಿಗಳು:
ಬೀಟ್ಯೂಟ್ ಪ್ಯೂರಿ-1/2 ಕಪ್
ಗೋಧಿ ಹಿಟ್ಟು-2 ಕಪ್
ಉಪ್ಪು ರುಚಿಗೆ ತಕ್ಕಷ್ಟು
ತುಪ್ಪ-ಸ್ವಲ್ಪ
ಪನ್ನೀರ್-1 ಕಪ್ ತುರಿದದ್ದು
ಬೆಳ್ಳುಳ್ಳಿ-2 ಎಸಳು
ಒಣಮೆಣಸು-2
ಜೀರಿಗೆ ಪುಡಿ-1 ಟೀ ಸ್ಪೂನ್
ಮಾಡುವ ವಿಧಾನ:
ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು ಸೇರಿಸಿ, ಬೀಟ್ರೂಟ್ ಪ್ಯೂರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ತುರಿದ ಪನೀರ್, ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ, ಜೀರಿಗೆ ಪುಡಿ ಮತ್ತು ಸ್ವಲ್ಪ ಒಣಮೆಣಸು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಬೀಟ್ರೂಟ್ ಮಿಶ್ರಣದಿಂದ ಪರಾಟ ಮಾಡಿ, ಪನೀರ್ ಮಿಶ್ರಣವನ್ನು ಸೇರಿಸಿ ಮತ್ತೊಮ್ಮೆ ನಾದಿಕೊಳ್ಳಿ. ನಂತರ ಬಾಣಲೆಗೆ ತುಪ್ಪ ಸವರಿ ಈ ಪರಾಟವನ್ನು ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ಇದೀಗ ಟೇಸ್ಟಿ ಪರಾಟ ಸವಿಯಲು ಸಿದ್ದ.