ವೆಜಿಟೇಬಲ್ ಮಂಚೂರಿಯನ್ ಬಹಳ ಜನಪ್ರಿಯವಾದ ಇಂಡೋ ಚೈನೀಸ್ ಖಾದ್ಯವಾಗಿದೆ. ಪಾರ್ಟಿಗಳಿಗೆ ಅಥವಾ ಸಂಜೆ ಕಾಫಿ ಜೊತೆಗೆ ಉತ್ತಮ ಸ್ನಾಕ್ಸ್ ಆಗಿದೆ. ವೆಜಿಟೇಬಲ್ ಮಂಚೂರಿಯನ್ ಮನೆಯಲ್ಲೇ ಸುಲಭವಾಗಿ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು
3 ಕಪ್ ಎಲೆಕೋಸು (ನುಣ್ಣಗೆ ಕತ್ತರಿಸಿದ್ದು)
1 ಕ್ಯಾರೆಟ್ (ನುಣ್ಣಗೆ ತುರಿದದ್ದು)
1 ಹಸಿರು ಬೆಲ್ ಪೆಪ್ಪರ್
1 ಈರುಳ್ಳಿ ,
2 ಬೇಯಿಸಿದ ಆಲೂಗಡ್ಡೆ
1/4 ಕಪ್ ಕಾರ್ನ್ಫ್ಲೋರ್
1/4 ಟೀಸ್ಪೂನ್ ಕರಿಮೆಣಸಿನ ಪುಡಿ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು
ಮಂಚೂರಿಯನ್ ಸಾಸ್ ಗೆ ಬೇಕಾಗುವ ಪದಾರ್ಥಗಳು
3 ಬೆಳ್ಳುಳ್ಳಿ ಎಸಳು
1 ಇಂಚಿನ ಶುಂಠಿ
1/4 ಕಪ್ ಸ್ಪ್ರಿಂಗ್ ಆನಿಯನ್
2 ಹಸಿರು ಮೆಣಸಿನಕಾಯಿ
1 ಚಮಚ ಕಾರ್ನ್ಫ್ಲೋರ್
1 ಕಪ್ ನೀರು
1 ಟೀಸ್ಪೂನ್ ಸೋಯಾ ಸಾಸ್
1 ಚಮಚ ಟೊಮೆಟೊ ಕೆಚಪ್
1 ಚಮಚ ಹೆಚ್ಚುವರಿ ವರ್ಜಿನ್ ಆಲಿವ್ ಎಣ್ಣೆ
ಮಂಚೂರಿಯನ್ಗೆ ಮೇಲೆ ನೀಡಿರುವ ಎಲ್ಲ ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿ ಅದಕ್ಕೆ ಕಾರ್ನ್ಫ್ಲೋರ್, ಉಪ್ಪು, ಕರಿಮೆಣಸಿನ ಪುಡಿ ಸೇರಿಸಿ, ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿ.
ಈಗ ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಈ ಉಂಡೆಗಳನ್ನು ಹಾಕಿ ಅವುಗಳನ್ನು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಇಟ್ಟುಕೊಳ್ಳಿ. ಈಗ ಮಂಚೂರಿಯನ್ ಸಾಸ್ ತಯಾರಿಸಲು ಕಾರ್ನ್ಫ್ಲೋರ್ ಅನ್ನು 1/4 ಕಪ್ ನೀರಿನ ಜೊತೆ ಬೆರೆಸಿ. ಇದರ ಜೊತೆಗೆ ಸೋಯಾ ಸಾಸ್, ಕೆಚಪ್ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಒಂದು ಪ್ಯಾನ್ನಲ್ಲಿಎಣ್ಣೆ ಹಾಕಿ ಬೆಳ್ಳುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿಗಳು, ಸ್ಪ್ರಿಂಗ್ ಆನಿಯನ್ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ನಂತರ ಇದಕ್ಕೆ ಕಾರ್ನ್ ಫ್ಲೋರ್ ಮಿಶ್ರಣವನ್ನು ಸೇರಿಸಿ ಕೆಲವು ನಿಮಿಷ ಬೇಯಿಸಿ. ಉರಿಯನ್ನು ಆಫ್ ಮಾಡಿ. ಇದಕ್ಕೆ ಫ್ರೈ ಮಾಡಿದ ತರಕಾರಿ ಉಂಡೆಗಳನ್ನು ಹಾಕಿ ಅಲಂಕರಿಸಿದರೆ ರುಚಿಯಾದ ವೆಜಿಟೇಬಲ್ ಮಂಚೂರಿಯನ್ ರೆಡಿ.