FOOD | ಇನ್ಸ್ಟೆಂಟ್ ಓಟ್ಸ್ ದೋಸೆ ಬ್ರೇಕ್ ಫಾಸ್ಟ್ ಗೆ ಬೆಸ್ಟ್ ಒಪ್ಶನ್! ನೀವೂ ಒಮ್ಮೆ ಟ್ರೈ ಮಾಡಿ

ಬೆಳಗ್ಗೆ ಆರೋಗ್ಯಕರವಾದ ಹಾಗೂ ಬೇಗನೆ ತಯಾರಾಗುವ ತಿಂಡಿ ಹುಡುಕುತ್ತಿದ್ರೆ ಈ ಇನ್ಸ್ಟೆಂಟ್ ಓಟ್ಸ್ ದೋಸೆ ಸರಿಯಾದ ಆಯ್ಕೆ.

ಬೇಕಾಗುವ ಸಾಮಗ್ರಿಗಳು:

ಓಟ್ಸ್ ದೋಸೆಗೆ:
¾ ಕಪ್ ಓಟ್ಸ್
½ ಕಪ್ ಅಕ್ಕಿ ಹಿಟ್ಟು
1 ಟೀಸ್ಪೂನ್ ಜೀರಿಗೆ
¼ ಕಪ್ ರವೆ /
½ ಕಪ್ ಮೊಸರು
1 ಇಂಚಿನ ಶುಂಠಿ
1 ಹಸಿರು ಮೆಣಸಿನಕಾಯಿ
ಸ್ವಲ್ಪ ಕರಿಬೇವು ಎಲೆಗಳು
½ ಟೀಸ್ಪೂನ್ ಮೆಣಸಿನ ಪುಡಿ
2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು
½ ಈರುಳ್ಳಿ
1 ಟೀಸ್ಪೂನ್ ಉಪ್ಪು
3 ಕಪ್ ನೀರು
ಎಣ್ಣೆ ಸ್ವಲ್ಪ

ಮಾಡುವ ವಿಧಾನ

ಮೊದಲಿಗೆ, ¾ ಕಪ್ ಪುಡಿಮಾಡಿದ ಓಟ್ಸ್, ½ ಕಪ್ ಅಕ್ಕಿ ಹಿಟ್ಟು, ¼ ಕಪ್ ರವೆ ಮತ್ತು ½ ಕಪ್ ಮೊಸರು ಸೇರಿಸಿಕೊಳ್ಳಿ. ಅದಕ್ಕೆ ಈಗ ಜೀರಿಗೆ, ಶುಂಠಿ, ಮೆಣಸಿನಕಾಯಿ,ಕರಿಬೇವು,ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಈರುಳ್ಳಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಅದಕ್ಕೆ 3 ಕಪ್ ನೀರು ಸೇರಿಸಿ ತೆಳ್ಳಗಿನ ಮಿಶ್ರಣ ತಯಾರಿಸಿ. 20 ನಿಮಿಷಗಳ ಕಾಲ ಮುಚ್ಚಿಡಿ. ನಂತರ ದೋಸೆ ಹಿಟ್ಟನ್ನು ನೀರು ದೋಸೆಯಂತೆ ತೆಳ್ಳಗೆ ಹರಡಿ ಎರಡು ಬದಿ ಬೇಯಿಸಿದರೆ ಇನ್ಸ್ಟೆಂಟ್ ಓಟ್ಸ್ ದೋಸೆ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!