ಸಂಜೆ ಆಗ್ತಿದಂತೆ ಏನಾದರೂ ತಿನ್ನಬೇಕು ಅದು ಆರೋಗ್ಯಕರ ಹಾಗೂ ಸಿಂಪಲ್ ಸ್ನಾಕ್ ಬೇಕು ಅನ್ನೋರಿಗೆ ಈ ಕಾಬೂಲ್ ಕಡಲೆ ಫ್ರೈ ಬೆಸ್ಟ್ ಆಯ್ಕೆಯಾಗಬಹುದು. ಬಿಸಿ ಬಿಸಿ ಚಹಾ ಜೊತೆಗೆ ಈ ಸ್ನಾಕ್ ತುಂಬಾ ಚೆನ್ನಾಗಿ ಹೊಂದುತ್ತೆ.
ಬೇಕಾಗುವ ಪದಾರ್ಥಗಳು:
ಕಾಬೂಲ್ ಕಡಲೆ – 1/4 ಕೆಜಿ
ಉಪ್ಪು – ರುಚಿಗೆ ತಕ್ಕಷ್ಟು
ಖಾರದ ಪುಡಿ – ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ
ಮಾಡುವ ವಿಧಾನ:
ಮೊದಲು ಕಾಬೂಲ್ ಕಡಲೆಯನ್ನು 8 ರಿಂದ 10 ಗಂಟೆ ನೆನೆಸಿಡಬೇಕು. ನಂತರ ಕುಕ್ಕರ್‌ನಲ್ಲಿ ಒಂದು ವಿಷಲ್ ಹಾಕಿ ಬೇಯಿಸಬೇಕು.
ಬೇಯಿಸಿದ ಕಡಲೆಯನ್ನು ಸೋಸಿ, ಒಣಗಿಸಿ ಇಡಬೇಕು. ನಂತರ, ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಕಾದ ನಂತರ, ಕಡಲೆಯನ್ನು ಸಣ್ಣ ಜಾಲರಿಯಲ್ಲಿಟ್ಟು ಎಣ್ಣೆಯಲ್ಲಿ ಫ್ರೈ ಮಾಡಬೇಕು. ಎಲ್ಲಾ ಕಡಲೆಗಳು ಚಿನ್ನದ ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿದ ನಂತರ, ಅವನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಖಾರದ ಪುಡಿ ಮಿಕ್ಸ್ ಮಾಡಿದರೆ ಕಾಬೂಲ್ ಕಡಲೆ ಫ್ರೈ ರೆಡಿ.