April 5, 2026
Sunday, April 5, 2026
spot_img

FOOD & KIDS | ಮಕ್ಕಳಿಗೆ ಪ್ರೋಟೀನ್ ರಿಚ್ ಆಹಾರ ಯಾವಾಗಿನಿಂದ ಶುರು ಮಾಡ್ಬೇಕು? ಬೆಳವಣಿಗೆಯ ಮೊದಲ ಹೆಜ್ಜೆ ಇದೇ!

ಮಕ್ಕಳ ಬೆಳವಣಿಗೆಯಲ್ಲಿ ಪ್ರೋಟೀನ್ ಅತಿ ಮುಖ್ಯ ಪಾತ್ರ ವಹಿಸುತ್ತದೆ. ದೇಹದ ಎಲುಬು, ಸ್ನಾಯು, ಮೆದುಳು ಮತ್ತು ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಪ್ರೋಟೀನ್ ಅಗತ್ಯ. ಆದರೆ ಹಲವಾರು ಪೋಷಕರಿಗೆ ಒಂದು ಪ್ರಶ್ನೆ ಕಾಡುತ್ತಿರುತ್ತದೆ ಮಕ್ಕಳಿಗೆ ಪ್ರೋಟೀನ್ ರಿಚ್ ಫುಡ್ ಯಾವಾಗಿನಿಂದ ಕೊಡಬಹುದು? ಇದರ ಸರಿಯಾದ ಉತ್ತರ ಮಕ್ಕಳ ವಯಸ್ಸು ಮತ್ತು ಜೀರ್ಣಶಕ್ತಿಗೆ ಅವಲಂಬಿತವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿ ಪ್ರಕಾರ, ಹುಟ್ಟಿದ ಮಗುವಿಗೆ ಮೊದಲ 6 ತಿಂಗಳು ತಾಯಿಯ ಹಾಲೇ ಅತ್ಯುತ್ತಮ ಪ್ರೋಟೀನ್ ಮೂಲ. ಇದರಲ್ಲಿ ಮಗುವಿಗೆ ಬೇಕಾದ ಎಲ್ಲಾ ಪೌಷ್ಠಿಕಾಂಶಗಳು ಇರುತ್ತವೆ. 6 ತಿಂಗಳು ಆದ ನಂತರ ನಿಧಾನವಾಗಿ ಪೂರಕ ಆಹಾರವನ್ನು ಆರಂಭಿಸಬಹುದು. ಇದೇ ಸಮಯದಲ್ಲಿ ಪ್ರೋಟೀನ್ ಇರುವ ಆಹಾರಗಳನ್ನು ಕೂಡ ಸ್ವಲ್ಪ ಪ್ರಮಾಣದಲ್ಲಿ ಪರಿಚಯಿಸಬಹುದು.

ಇದನ್ನೂ ಓದಿ:

6ರಿಂದ 8 ತಿಂಗಳ ಮಕ್ಕಳಿಗೆ ಮೃದುವಾದ ಮೂಂಗ್ ದಾಲ್ ಪೇಸ್ಟ್, ಬೇಳೆ ಸಾರು, ಚೆನ್ನಾಗಿ ಬೇಯಿಸಿದ ಕಡಲೆಬೇಳೆ ನೀರು, ಮ್ಯಾಶ್ ಮಾಡಿದ ಪನೀರ್ ಅಥವಾ ಮೊಸರು ಕೊಡಬಹುದು. 8 ತಿಂಗಳ ನಂತರ ಚೆನ್ನಾಗಿ ಮ್ಯಾಶ್ ಮಾಡಿದ ಮೊಟ್ಟೆಯ ಹಳದಿ ಭಾಗ, ದಾಲ್ ಖಿಚಡಿ, ಮಸೂರ ದಾಲ್, ಮೃದುವಾದ ಟೋಫು ಕೊಡಬಹುದು.

ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಹಾಲು, ಮೊಸರು, ಪನೀರ್, ಮೊಟ್ಟೆ, ಬೇಳೆ, ಸೋಯಾ, ಕಡಲೆಕಾಯಿ ಪುಡಿ ಸೇರಿಸಿದ ಆಹಾರಗಳನ್ನು ಕೊಡಬಹುದು. ಸಸ್ಯಾಹಾರಿ ಮಕ್ಕಳಿಗೆ ದಾಲ್, ರಾಜ್ಮಾ, ಕಡಲೆ, ಪನೀರ್ ಉತ್ತಮ ಆಯ್ಕೆ.

ಮುಖ್ಯವಾಗಿ, ಹೊಸ ಆಹಾರವನ್ನು ಒಂದೊಂದಾಗಿ ಪರಿಚಯಿಸಿ, ಅಲರ್ಜಿ ಅಥವಾ ಜೀರ್ಣ ಸಮಸ್ಯೆ ಇದೆಯೇ ಎಂದು ಗಮನಿಸುವುದು ಅಗತ್ಯ. ಸರಿಯಾದ ಸಮಯದಲ್ಲಿ ಪ್ರೋಟೀನ್ ಆಹಾರ ಶುರು ಮಾಡಿದರೆ ಮಕ್ಕಳ ಬೆಳವಣಿಗೆ ಇನ್ನಷ್ಟು ಆರೋಗ್ಯಕರವಾಗಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !