ನವರತ್ನ ಕೂರ್ಮ ಭಾರತೀಯ ಕರಿಯಾಗಿದ್ದು. ಇದನ್ನು ಒಂಬತ್ತು ವಿಧದ ತರಕಾರಿಗಳು, ಹಣ್ಣುಗಳು ಮತ್ತು ಬೀಜಗಳಿಂದ ತಯಾರಿಸಲಾಗುತ್ತದೆ. ಇದಕ್ಕೆ ಹೆಸರು ಬಂದಿರುವುದೇ ಒಂಬತ್ತು ಪದಾರ್ಥಗಳಿಂದ.
ಬೇಕಾಗುವ ಪದಾರ್ಥಗಳು:
ಮೊದಲೇ ಬೇಯಿಸಿದ ತರಕಾರಿಗಳು (ಕ್ಯಾರೆಟ್, ಬೀನ್ಸ್, ಹೂಕೋಸು ನಿಮ್ಮ ಆಯ್ಕೆಯ ತರಕಾರಿಗಳು)
ಈರುಳ್ಳಿ-2 ಕತ್ತರಿಸಿದ-1 ಕಪ್
ಹಸಿ ಬಟಾಣಿ-1/2 ಕಪ್
ಬಾದಾಮಿ-15
ಜೀರಿಗೆ-1 ಟೀಸ್ಪೂನ್
ಬೇ ಎಲೆಗಳು-1
ದಾಲ್ಚಿನ್ನಿ ತುಂಡು -1 ತುಂಡು
ಶುಂಠಿ ಬೆಳ್ಳುಳ್ಳಿ ಪೇಸ್ಟ್-1/2 ಟೀಸ್ಪೂನ್
ಕೊತ್ತಂಬರಿ ಪುಡಿ-2 ಟೀಸ್ಪೂನ್
ಹಸಿರು ಮೆಣಸಿನಕಾಯಿ-2
ಬೆಲ್ ಪೆಪರ್ -1/2 ಕಪ್ ಕತ್ತರಿಸಿದ
ಗರಂ ಮಸಾಲ-1 ಟೀಸ್ಪೂನ್
ಅರಿಶಿನ ಪುಡಿ-1/2 ಟೀಸ್ಪೂನ್
ಕೆಂಪು ಮೆಣಸಿನ ಪುಡಿ-1/2 ಟೀಸ್ಪೂನ್
ಕಸೂರಿ ಮೇಥಿ-1 ಟೀಸ್ಪೂನ್
ಎಣ್ಣೆ-2 ಟೀಸ್ಪೂನ್
ಹಾಲು-1/2 ಕಪ್
ನೀರು-1/2 ಕಪ್+2 ಟೀಸ್ಪೂನ್
ರಕಾರಿ ಸ್ಟಾಕ್ -1 1/2 ಕಪ್
ಕಾರ್ನ್ ಹಿಟ್ಟು-2 ಟೀಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಬಾದಾಮಿಯನ್ನು ಬೆಚ್ಚಗಿನ ನೀರಿನಲ್ಲಿ 1-2 ಗಂಟೆಗಳ ಕಾಲ ನೆನೆಸಿಡಿ. ನಂತರ ಬಾದಾಮಿ ಸಿಪ್ಪೆ ಸುಲಿದು, 1/2 ಕಪ್ ಈರುಳ್ಳಿಯೊಂದಿಗೆ ಬಾಣಲೆಗೆ ಹಾಕಿ, 1/2 ಕಪ್ ನೀರು ಸೇರಿಸಿ 5 ನಿಮಿಷ ಬೇಯಿಸಿ. ನಂತರ ಅದರ ಪೇಸ್ಟ್ ಮಾಡಿಕೊಳ್ಳಿ.
ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಬೇ ಎಲೆಗಳು, ದಾಲ್ಚಿನ್ನಿ ತುಂಡುಗಳು, ಜೀರಿಗೆ ಹಾಕಿ, ಅವು ಸಿಡಿಯುತ್ತಿದ್ದಂತೆ 1/2 ಕಪ್ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನಕಾಯಿಗಳನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಅದಕ್ಕೆ ರುಬ್ಬಿದ ಪೇಸ್ಟ್ ಸೇರಿಸಿ, ಪೇಸ್ಟ್ ಚೆನ್ನಾಗಿ ಬೇಯುವವರೆಗೆ ಮತ್ತು ಎಣ್ಣೆ ಬಿಡುವವರೆಗೆ ಹುರಿಯಿರಿ. ಈಗ ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬಾಣಲೆಗೆ ಬೆಲ್ ಪೆಪರ್ ಸೇರಿಸಿ ಹುರಿಯಿರಿ.
ಈ ಮಿಶ್ರಣಕ್ಕೆ 1 ಕಪ್ ತರಕಾರಿ ಸ್ಟಾಕ್ ಅಥವಾ ಸಾಮಾನ್ಯ ನೀರನ್ನು ಸೇರಿಸಿ ಬೇಯಿಸಿ. ಜೊತೆಗೆ ಬೇಯಿಸಿಟ್ಟ ತರಕಾರಿಗಳನ್ನು ಹಾಕಿ. ಸ್ವಲ್ಪ ಗರಂ ಮಸಾಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹಂತದಲ್ಲಿ ಹಾಲು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈಗ ಜೋಳದ ಹಿಟ್ಟು ಮತ್ತು 2 ಚಮಚ ನೀರಿನ ಮಿಶ್ರಣವನ್ನು ಮಾಡಿ ಮತ್ತು ಆ ಮಿಶ್ರಣವನ್ನು ಕುರ್ಮಾಗೆ ಸೇರಿಸಿ, ಬೇಕಾದಷ್ಟು ಗಟ್ಟಿ ಮಾಡಿಕೊಂಡು ಕೊನೆಗೆ ಕಸೂರಿ ಮೇಥಿ ಹಾಕಿದರೆ ನವರತ್ನ ಕೂರ್ಮ ರೆಡಿ.