ಹೊಸದಿಗಂತ ಡಿಜಿಟಲ್ ಡೆಸ್ಕ್:
ಅವರೆ ದೋಸೆ, ಅವರೆ ಪಾಯಸ, ಅವರೆ ವಡೆ, ಅವರೆ ಮಂಚೂರಿ, ಅವರೆ ಚಾಟ್ಸ್, ಅವರೆ ಹಲ್ವಾ..
ಬಾಯಲ್ಲಿ ನೀರು ಬಂತಾ? ಪ್ರತೀ ವರ್ಷದಂತೆ ಈ ವರ್ಷವೂ ಬೆಂಗಳೂರಿನಲ್ಲಿ ಅವರೆಬೇಳೆ ಮೇಳ ಆರಂಭವಾಗಲಿದೆ.
ಶ್ರೀ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಆಯೋಜಿಸುವ ಅವರೆಬೇಳೆ ಮೇಳ ಜನವರಿ5 ರಿಂದ 9 ರವರೆಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಕಳೆದ ವರ್ಷ ಅವರೆಬೇಳೆ ಮೇಳದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದು, ಕಾಲ್ತುಳಿತ ಉಂಟಾಗಿತ್ತು. ಈ ವರ್ಷ ಆಯೋಜಕರು ಜನರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.