Monday, December 15, 2025

FOOD | ಮನೆಯಲ್ಲೇ ಮಾಡಿ ಸವಿಯಿರಿ ಪಂಜಾಬಿ ಸ್ಟೈಲ್ ಚಿಕನ್ ಕರಿ!

ಉತ್ತರ ಭಾರತದ ಅಡುಗೆಗಳಲ್ಲಿ ಪಂಜಾಬಿ ಸ್ಟೈಲ್ ಚಿಕನ್ ಕರಿ ಎಂದರೆ ವಿಶೇಷ ಸ್ಥಾನ. ದಪ್ಪ ಗ್ರೇವಿ, ಬೆಣ್ಣೆ-ಮಸಾಲೆಗಳ ಘಮಘಮ ಸುಗಂಧ ಸಂಯೋಜನೆ ಇದಕ್ಕೆ ಮುಖ್ಯ ಆಕರ್ಷಣೆ. ನಾನ್, ರೋಟಿ, ಕುಲ್ಚಾ ಅಥವಾ ಜೀರಾ ರೈಸ್ ಜೊತೆ ಸವಿಯಲು ಈ ಚಿಕನ್ ಕರಿ ತುಂಬಾ ಸೂಕ್ತ.

ಬೇಕಾಗುವ ಪದಾರ್ಥಗಳು

ಚಿಕನ್ – 500 ಗ್ರಾಂ
ಈರುಳ್ಳಿ – 3
ಟೊಮ್ಯಾಟೊ – 3 (ಪೇಸ್ಟ್ ಮಾಡಿದ್ದು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
ಹಸಿಮೆಣಸು – 2
ಕಾಜು – 10 (ನೆನೆಸಿ ಪೇಸ್ಟ್ ಮಾಡಿದ್ದು)
ಬೆಣ್ಣೆ – 2 ಟೇಬಲ್ ಸ್ಪೂನ್
ಎಣ್ಣೆ – 2 ಟೇಬಲ್ ಸ್ಪೂನ್
ಹಾಲು ಅಥವಾ ತಾಜಾ ಕ್ರೀಮ್ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀಸ್ಪೂನ್
ಪಲಾವ್ ಎಲೆ – 1
ದಾಲ್ಚಿನ್ನಿ – 1 ಚಿಕ್ಕ ತುಂಡು
ಲವಂಗ – 3
ಗರಂ ಮಸಾಲಾ – 1 ಟೀಸ್ಪೂನ್
ಧನಿಯಾ ಪುಡಿ – 2 ಟೀಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಅರಿಶಿನ – ½ ಟೀಸ್ಪೂನ್
ಉಪ್ಪು – ರುಚಿಗೆ
ಕಸೂರಿ ಮೆಥಿ – 1 ಟೀಸ್ಪೂನ್

ಮಾಡುವ ವಿಧಾನ

ಬಾಣಲೆಯಲ್ಲಿ ಎಣ್ಣೆ ಮತ್ತು ಬೆಣ್ಣೆ ಬಿಸಿ ಮಾಡಿ ಜೀರಿಗೆ, ಪಲಾವ್ ಎಲೆ, ದಾಲ್ಚಿನ್ನಿ, ಲವಂಗ ಹಾಕಿ ಫ್ರೈ ಮಾಡಿ. ಈಗ ಈರುಳ್ಳಿ ಸೇರಿಸಿ ಬಂಗಾರದ ಬಣ್ಣ ಬರುವವರೆಗೆ ಬಾಡಿಸಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿಮೆಣಸು ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಟೊಮ್ಯಾಟೊ ಪೇಸ್ಟ್ ಸೇರಿಸಿ ಎಣ್ಣೆ ಬಿಡುವವರೆಗೂ ಚೆನ್ನಾಗಿ ಬೇಯಿಸಿ.

ಈಗ ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ, ಉಪ್ಪು ಹಾಕಿ ಕಲಸಿ. ನಂತರ ಚಿಕನ್ ಹಾಕಿ ಮಸಾಲೆ ಚೆನ್ನಾಗಿ ಹಚ್ಚಿಕೊಳ್ಳುವಂತೆ ಕಲಸಿ 5 ನಿಮಿಷ ಬೇಯಿಸಿ. ಜೊತೆಗೆ ಕಾಜು ಪೇಸ್ಟ್ ಮತ್ತು ಸ್ವಲ್ಪ ನೀರು ಸೇರಿಸಿ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ. ಕೊನೆಯಲ್ಲಿ ಕ್ರೀಮ್, ಗರಂ ಮಸಾಲಾ ಮತ್ತು ಕಸೂರಿ ಮೆಥಿ ಸೇರಿಸಿ 2 ನಿಮಿಷ ಕುದಿಸಿ ಆಫ್ ಮಾಡಿ.

error: Content is protected !!