ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡು ಇದೀಗ ಎಲ್ಲೆಡೆ ಪ್ರಸಿದ್ಧಿ ಪಡೆದಿರುವ ಸೆಟ್ ದೋಸೆ ಎಲ್ಲರಿಗು ಪ್ರಿಯ. ಸಾಮಾನ್ಯ ದೋಸೆಯಿಗಿಂತ ಸ್ವಲ್ಪ ದಪ್ಪವಾಗಿದ್ದು, ಸಾಫ್ಟ್ ಆಗಿ ಬಾಯಲ್ಲಿ ಇಟ್ಟರೆ ಕರಗುವಂತಿರುತ್ತದೆ. ಸಾಮಾನ್ಯವಾಗಿ ಈ ದೋಸೆಯನ್ನು 2 ಅಥವಾ 3 ಪೀಸ್‌ಗಳನ್ನು ಒಟ್ಟಿಗೆ “ಸೆಟ್” ಆಗಿ ನೀಡಲಾಗುತ್ತದೆ. ಇದನ್ನು ಸಾಂಬಾರ್, ಚಟ್ನಿ ಅಥವಾ ಬಟಾಟೆ ಪಲ್ಯದ ಜೊತೆ ಸವಿದರೆ ರುಚಿಯ ಮಜಾನೇ ಬೇರೆ!
ಬೇಕಾಗುವ ಪದಾರ್ಥಗಳು:
2 ಕಪ್ ಇಡ್ಲಿ ಅಕ್ಕಿ
½ ಕಪ್ ಉದ್ದಿನ ಬೇಳೆ
½ ಟೀಸ್ಪೂನ್ ಮೆಂತ್ಯೆ
1 ಕಪ್ ಅವಲಕ್ಕಿ
ನೆನೆಸಲು ಮತ್ತು ರುಬ್ಬಲು ನೀರು
2 ಟೀಸ್ಪೂನ್ ಉಪ್ಪು
ಎಣ್ಣೆ ಸ್ವಲ್ಪ
ಮಾಡುವ ವಿಧಾನ:
ಮೊದಲು ಅಕ್ಕಿ, ಉದ್ದಿನ ಬೇಳೆ ಹಾಗೂ ಮೆಂತ್ಯ ಕಾಳನ್ನು ಒಟ್ಟಿಗೆ ತೊಳೆದು 4-5 ಗಂಟೆ ನೀರಿನಲ್ಲಿ ನೆನೆಸಿಡಿ. ಇನ್ನೊಂದು ಪಾತ್ರೆಯಲ್ಲಿ ಅವಲಕ್ಕಿಯನ್ನೂ 30 ನಿಮಿಷಗಳಷ್ಟು ಕಾಲ ನೆನೆಸಿಡಿ. ನೆನೆಸಿದ ನಂತರ ಎಲ್ಲವನ್ನು ಒಟ್ಟಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಈ ಮಿಶ್ರಣವನ್ನು ಕನಿಷ್ಠ 6-8 ಗಂಟೆಗಳಷ್ಟು ಹುದುಗಿಸಲು ಬಿಡಿ.
ಹುರಿದ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈಗ ಬಿಸಿ ತವಾದ ಮೇಲೆ ಎಣ್ಣೆ ಸವರಿ, ಸ್ವಲ್ಪ ದಪ್ಪದ ದೋಸೆಯಂತೆ ಹಾಕಿ. ಮುಚ್ಚಳ ಮುಚ್ಚಿ 2-3 ನಿಮಿಷ ಬೇಯಿಸಿ. ಇದನ್ನು ಮಗುಚಿ ಹಾಕುವ ಅವಶ್ಯಕತೆ ಇಲ್ಲ.