ಭಾರತೀಯ ಅಡುಗೆಯಲ್ಲಿ ದಾಲ್ ತಡ್ಕಾಗೆ ಒಂದು ವಿಶೇಷ ಸ್ಥಾನವಿದೆ. ಬಿಸಿ ಅನ್ನಕ್ಕೆ ಅಥವಾ ನಾನ್–ರೊಟ್ಟಿಗೆ ಜೊತೆ ಸೇರಿಸಿಕೊಂಡಾಗ ಬಾಯಲ್ಲಿ ಕರಗುವ ಈ ಸಿಂಪಲ್ ರೆಸಿಪಿ ಎಲ್ಲರಿಗು ಇಷ್ಟ. ಈಗ ಮನೆಲ್ಲೇ ರೆಸ್ಟೋರೆಂಟ್ ಫ್ಲೇವರ್‌ನಂತೆ ದಾಲ್ ತಡ್ಕಾ ಮಾಡೋ ವಿಧಾನ ನೋಡೋಣ.
ಬೇಕಾಗುವ ಪದಾರ್ಥಗಳು:
ತೊಗರಿಬೇಳೆ – 1 ಕಪ್
ನೀರು – 3 ಕಪ್
ಅರಿಶಿನ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ/ಎಣ್ಣೆ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀಸ್ಪೂನ್
ಸಾಸಿವೆ – ½ ಟೀಸ್ಪೂನ್
ಬೆಳ್ಳುಳ್ಳಿ – 4 ಕಾಳಿ
ಹಸಿಮೆಣಸು – 2
ಒಣಮೆಣಸು – 2
ಈರುಳ್ಳಿ – 1
ಟೊಮ್ಯಾಟೊ – 1
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಧನಿಯಾ ಪುಡಿ – ½ ಟೀಸ್ಪೂನ್
ಗರಂ ಮಸಾಲಾ – ½ ಟೀಸ್ಪೂನ್
ಕರಿಬೇವು – ಕೆಲವು
ಕೊತ್ತಂಬರಿ – ಸ್ವಲ್ಪ (ಅಲಂಕಾರಕ್ಕೆ)
ತಯಾರಿಸುವ ವಿಧಾನ:
ತೊಗರಿಬೇಳೆಗೆ ನೀರು, ಅರಿಶಿನ, ಸ್ವಲ್ಪ ಉಪ್ಪು ಸೇರಿಸಿ ಕುಕ್ಕರ್ ನಲ್ಲಿ 3–4 ವಿಷಲ್ ಆಗುವವರೆಗೆ ಬೇಯಿಸಿ. ನಂತರ ಚೆನ್ನಾಗಿ ಮ್ಯಾಶ್ ಮಾಡಿ ಇಟ್ಟುಕೊಳ್ಳಿ.
ಒಂದು ಪ್ಯಾನ್‌ನಲ್ಲಿ ತುಪ್ಪ/ಎಣ್ಣೆ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಒಣಮೆಣಸು, ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಸುಗಂಧ ಬರೋವರೆಗೂ ಹುರಿಯಿರಿ. ಈರುಳ್ಳಿ ಸೇರಿಸಿ ಬಂಗಾರ ಬಣ್ಣ ಬರುವವರೆಗೆ ಹುರಿದು, ಟೊಮ್ಯಾಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ. ಈಗ ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಸೇರಿಸಿ 1 ನಿಮಿಷ ಹುರಿಯಿರಿ.
ಬೇಯಿಸಿದ ದಾಲ್‌ನ್ನು ಈ ಮಿಶ್ರಣಕ್ಕೆ ಸೇರಿಸಿ, ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ ಸರಿಯಾದ ಗಟ್ಟಿತನಕ್ಕೆ ತರುತ್ತಾ 5 ನಿಮಿಷ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಹಾಕಿ ಬಿಸಿ ಬಿಸಿ ಸರ್ವ್ ಮಾಡಿ.

