March 8, 2026
Sunday, March 8, 2026
spot_img

FOOD | ಸ್ಪೆಷಲ್ ಅಫ್ಘಾನ್ Malai Chicken Momos ಮಾಡಿ! ತಿಂದವ್ರು ಇದ್ರ ರುಚಿಗೆ ಬೆಣ್ಣೆ ತರ ಕರಗಿಹೋಗ್ತಾರೆ!

ತಿಂಡಿಯಲ್ಲಿ ಸ್ವಲ್ಪ ಹೊಸ ರುಚಿ ಬೇಕು ಅನಿಸಿದಾಗ ಅಫ್ಘಾನ್ ಸ್ಟೈಲ್ Malai Chicken Momos ಮಾಡಿ. ಮೃದುವಾದ ಚಿಕನ್, ಕ್ರೀಮಿ ಮಲಾಯಿ ಫ್ಲೇವರ್ ಮತ್ತು ಸ್ಟೀಮ್ ಮಾಡಿದ ಮೊಮೊಸ್ ತುಂಬಾ ರಿಚ್ ಟೇಸ್ಟ್ ಕೊಡುತ್ತದೆ. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಈ ರೆಸಿಪಿ ಸಂಜೆ ಸ್ನ್ಯಾಕ್‌ಗೆ ಪರ್ಫೆಕ್ಟ್.

ಬೇಕಾಗುವ ಪದಾರ್ಥಗಳು:

ಮೈದಾ – 1 ಕಪ್
ಚಿಕನ್ ಕೀಮಾ – 250 ಗ್ರಾಂ
ಕ್ರೀಮ್ (ಮಲಾಯಿ) – 3 ಟೇಬಲ್ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಮೆಣಸು ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಬೆಣ್ಣೆ – 1 ಟೇಬಲ್ ಸ್ಪೂನ್

ಮಾಡುವ ವಿಧಾನ:
ಮೊದಲು ಮೈದಾಕ್ಕೆ ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ಮೃದುವಾಗಿ ಕಲಸಿ ಹಿಟ್ಟು ಮಾಡಿ 15 ನಿಮಿಷ ಮುಚ್ಚಿಡಿ.

ಒಂದು ಬೌಲ್‌ನಲ್ಲಿ ಚಿಕನ್ ಕೀಮಾ, ಮಲಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸು ಪುಡಿ, ಉಪ್ಪು ಮತ್ತು ಕೊತ್ತಂಬರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿ ಚಪಾತಿ ಹಾಗೆ ಲಟ್ಟಿಸಿ, ಅದರ ಮಧ್ಯೆ ಚಿಕನ್ ಮಿಶ್ರಣ ಇಟ್ಟು ಮೊಮೊಸ್ ಆಕಾರದಲ್ಲಿ ಮಡಚಿ.

ಸ್ಟೀಮರ್‌ನಲ್ಲಿ 10–12 ನಿಮಿಷ ಬೇಯಿಸಿ. ಕೊನೆಯಲ್ಲಿ ಸ್ವಲ್ಪ ಬೆಣ್ಣೆ ಬ್ರಷ್ ಮಾಡಿದರೆ ಇನ್ನೂ ಟೇಸ್ಟಿ ಆಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !