ಆನಿಯನ್ ರಿಂಗ್ಸ್ ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರು ಬರುತ್ತೆ. ಮಕ್ಕಳಿಂದ ಹಿಡಿದು ಎಲ್ಲರು ತಿನ್ನಲು ಇಷ್ಟಪಡುವ ಈ ಸ್ನ್ಯಾಕ್ಸ್ ಮಾಡೋದು ತುಂಬಾ ಸುಲಭ.
ಬೇಕಾದ ಪದಾರ್ಥಗಳು
ಈರುಳ್ಳಿ ರಿಂಗ್ಸ್- ಎರಡು ಕಪ್
ಚೀಸ್ ತುಂಡು- ಹತ್ತು
ಬ್ರೆಡ್ ಪುಡಿ- ಅರ್ಧ ಕಪ್
ಎಣ್ಣೆ- ಕರಿಯಲು
ಮೈದಾ- ಅರ್ಧ ಕಪ್
ಕಾರ್ನ್ ಫ್ಲೋರ್- ಕಾಲು ಕಪ್
ಕೊತ್ತಂಬರಿ ಪುಡಿ- ಎರಡು ಚಮಚ
ಬೆಳ್ಳುಳ್ಳಿ ಪುಡಿ- ಒಂದು ಟೀ ಚಮಚ
ಚಿಲ್ಲಿ ಫ್ಲೇಕ್ಸ್- ಒಂದು ಟೀ ಚಮಚ
ಓರೆಗಾನೊ- ಒಂದು ಟೀ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಈರುಳ್ಳಿ ರಿಂಗ್ಸ್ ಮಾಡಲು, ಈರುಳ್ಳಿಯನ್ನು ಉಂಗುರಗಳಂತೆ ಕತ್ತರಿಸಿ. ಚೀಸ್ ಸ್ಲೈಸ್ಗಳನ್ನು ತೆಗೆದುಕೊಂಡು ಅವುಗಳನ್ನು ಉದ್ದವಾಗಿ ಕತ್ತರಿಸಿ. ಈರುಳ್ಳಿ ರಿಂಗ್ಸ್ ಒಳಗೆ ಚೀಸ್ ಅನ್ನು ಉದ್ದವಾಗಿ ಇರಿಸಿ ಸ್ವಲ್ಪ ಗಟ್ಟಿಯಾಗಿ ಒತ್ತಿ.
ಈಗ ಒಂದು ಪಾತ್ರೆಯಲ್ಲಿ ಮೈದಾ, ಕಾರ್ನ್ ಫ್ಲೋರ್, ಕೊತ್ತಂಬರಿ ಪುಡಿ, ಶುಂಠಿ ಪುಡಿ, ಚಿಲ್ಲಿ ಫ್ಲೇಕ್ಸ್, ಓರೆಗಾನೊ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹಾಗೆ ತೆಳುವಾಗುವವರೆಗೆ ಕಲಸಿ ಪಕ್ಕಕ್ಕೆ ಇಡಿ.
ಈಗ ಒಂದು ತಟ್ಟೆಗೆ ಬ್ರೆಡ್ ಪುಡಿ ಹಾಕಿ ಚೀಸ್ ಈರುಳ್ಳಿ ರಿಂಗ್ ಅನ್ನು ಹಿಟ್ಟಿನ ಮಿಶ್ರಣದಲ್ಲಿ ಅದ್ದಿ. ನಂತರ ಅದನ್ನು ಬ್ರೆಡ್ ಪುಡಿಯಲ್ಲಿ ಹೊರಳಿಸಿ ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿದರೆ ಆನಿಯನ್ ರಿಂಗ್ಸ್ ಸವಿಯಲು ಸಿದ್ಧ.