ಹಲಸಿನ ಸಿಹಿ ಸುವಾಸನೆ ಹಾಗೂ ತೆಂಗಿನ ತುರಿಯೊಂದಿಗೆ ತಯಾರಾಗುವ ಹಲಸಿನ ಹಣ್ಣಿನ ಇಡ್ಲಿ ಒಂದು ವಿಶಿಷ್ಟ ಸಿಹಿ ತಿನಿಸು. ಈ ರುಚಿಕರವಾದ ಇಡ್ಲಿ ಅತ್ಯಂತ ಸರಳವಾಗಿ ತಯಾರಿಸಬಹುದಾಗಿದೆ. ಹಾಲು, ತುಪ್ಪ ಅಥವಾ ಬೆಲ್ಲದ ನೀರಿನ ಜೊತೆ ಸವಿದರೆ ಅದ್ಭುತ.
ಅವಶ್ಯಕ ಪದಾರ್ಥಗಳು:
ಹಲಸಿನ ಹಣ್ಣಿನ ಸೊಳೆ– 1 ಕಪ್
ಅಕ್ಕಿಹಿಟ್ಟು – 1 ಕಪ್
ತೆಂಗಿನ ತುರಿ – ½ ಕಪ್
ಬೆಲ್ಲ – ½ ಕಪ್ (ಅಗತ್ಯಕ್ಕೆ ಅನುಗುಣವಾಗಿ ಪ್ರಮಾಣ ಇಳಿಸಬಹುದು)
ಏಲಕ್ಕಿ ಪುಡಿ – ¼ ಟೀ ಸ್ಪೂನ್
ತುಪ್ಪ – 2 ಟೀ ಸ್ಪೂನ್
ಉಪ್ಪು – ಚಿಟಿಕೆ
ಎಳ್ಳು – 1 ಟೀ ಸ್ಪೂನ್ (ಐಚ್ಛಿಕ)
ತಯಾರಿಸುವ ವಿಧಾನ:
ಹಲಸಿನ ಹಣ್ಣನ್ನು ಸಣ್ಣ ತುಂಡುಗಳಾಗಿ ಮಾಡಿ ಮಿಕ್ಸರ್‌ನಲ್ಲಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
ಈಗ ಬೆಲ್ಲವನ್ನು ಸ್ವಲ್ಪ ನೀರಿನಲ್ಲಿ ಕರಗಿಸಿ ಸೋಸಿಕೊಳ್ಳಿ. ಮತ್ತೊಂದು ದೊಡ್ಡ ಪಾತ್ರೆಗೆ ಅಕ್ಕಿಹಿಟ್ಟು, ಹಲಸಿನ ಹಣ್ಣಿನ ಪೇಸ್ಟ್, ಕರಗಿಸಿದ ಬೆಲ್ಲ, ತೆಂಗಿನ ತುರಿ, ಏಲಕ್ಕಿ ಪುಡಿ, ತುಪ್ಪ, ಉಪ್ಪು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿ. ಈಗ ಇಡ್ಲಿ ತಟ್ಟೆಗೆ ತುಪ್ಪ ಸವರಿ ಹಿಟ್ಟನ್ನು ಹಾಕಿ 15–20 ನಿಮಿಷ ಆವಿಯಲ್ಲಿ ಬೇಯಿಸಿದರೆ ಬಿಸಿ ಬಿಸಿ ಹಲಸಿನ ಇಡ್ಲಿ ಸಿದ್ಧ.