FOOD| ಮಂಗಳೂರು ಶೈಲಿಯ ಪನೀರ್ ಘೀ ರೋಸ್ಟ್ : ನೀವೂ ಟ್ರೈ ಮಾಡಿ

ಮಂಗಳೂರು ಶೈಲಿಯ ಘೀ ರೋಸ್ಟ್ ಅಂದಾಗ ಮೊದಲಿಗೆ ನೆನೆಪಿಗೆ ಬರೋದು ಚಿಕನ್. ಆದ್ರೆ ಇವತ್ತು ನಾವು ವೆಜೆಟೇರಿಯನ್ಸ್ ಗಾಗಿ ಪನೀರ್ ಘೀ ರೋಸ್ಟ್ ರೆಸಿಪಿ ಹೇಗೆ ಮಾಡೋದು ಅಂತ ನೋಡೋಣ.

ಬೇಕಾಗುವ ಪದಾರ್ಥಗಳು:

ಪನೀರ್ – 200 ಗ್ರಾಂ (ಚಿಕ್ಕ ಕ್ಯೂಬ್ಸ್ ಮಾಡಿ)
ತುಪ್ಪ – 2 ಟೀಸ್ಪೂನ್
ಈರುಳ್ಳಿ – 1 (ಸಣ್ಣಗಾಗಿ ಕತ್ತರಿಸಿ)
ಟೊಮೇಟೊ – 1 (ಪೇಸ್ಟ್ ಮಾಡಿ)
ಜೀರಿಗೆ – 1 ಟೀಸ್ಪೂನ್
ಹಸಿಮೆಣಸು – 2 (ಕತ್ತರಿಸಿ)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಧನಿಯಾ ಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ½ ಟೀಸ್ಪೂನ್
ಅರಶಿನ ಪುಡಿ – ¼ ಟೀಸ್ಪೂನ್
ಗರಂ ಮಸಾಲಾ – ½ ಟೀಸ್ಪೂನ್
ಕಸೂರಿ ಮೇಥಿ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ನೀರು – 2 ಟೇಬಲ್ ಸ್ಪೂನ್ (ಆವಶ್ಯಕತೆ ಇದ್ದರೆ)

ತಯಾರಿಸುವ ವಿಧಾನ:

ಒಂದು ಬಾಣಲೆಯಲ್ಲಿ ತುಪ್ಪ ಹಾಕಿ, ಪನೀರ್ ಕ್ಯೂಬ್ಸ್ ಅನ್ನು ಸ್ವಲ್ಪ ಫ್ರೈ ಮಾಡಿ ಸೈಡ್ ನಲ್ಲಿ ಇಡಿ. ಅದೇ ಬಾಣಲೆಗೆ ಇನ್ನಷ್ಟು ತುಪ್ಪ ಹಾಕಿ, ಜೀರಿಗೆ, ಹಸಿಮೆಣಸು, ಈರುಳ್ಳಿ ಸೇರಿಸಿ ಬ್ರೌನ್ ಆಗುವವರೆಗೆ ಹುರಿಯಿರಿ. ಈಗ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಬಾಡಿಸಿ. ಆಮೇಲೆ ಟೊಮೇಟೊ ಪೇಸ್ಟ್ ಹಾಕಿ, ಸರಿಯಾಗಿ ಬೇಯಿಸಿ.

ಇದಕ್ಕೆ ಧನಿಯಾ ಪುಡಿ, ಕೆಂಪು ಮೆಣಸಿನ ಪುಡಿ, ಅರಶಿನ ಪುಡಿ, ಗರಂ ಮಸಾಲಾ, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಈಗ ಇದಕ್ಕೆ ಪನೀರ್ ಕ್ಯೂಬ್ಸ್ ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ. ಅಗತ್ಯವಿದ್ದರೆ, ಸ್ವಲ್ಪ ನೀರು ಸೇರಿಸಿ.

ಕೊನೆಗೆ ಕಸೂರಿ ಮೇಥಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿದರೆ, ರುಚಿಯಾದ ಪನೀರ್ ಘೀ ರೋಸ್ಟ್ ರೆಡಿ.

ಇದನ್ನು ಚಪಾತಿ, ಪರೋಟಾ ಅಥವಾ ಬಿಸಿ ಅನ್ನದ ಜೊತೆ ಸವಿಯಬಹುದು. ಹೆಚ್ಚಿನ ರುಚಿಗೆ, ಸ್ವಲ್ಪ ಮೊಸರು ಅಥವಾ ಲೆಮನ್ ಜ್ಯೂಸ್ ಸೇರಿಸಬಹುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!