ಗ್ರೀನ್ ಚಟ್ನಿ ಸಮೋಸಾ, ಪಾನಿ ಪೂರಿ ಜೊತೆ ಹಲವು ವಿಧದ ತಿಂಡಿಗಳೊಂದಿಗೆ ಸವಿದು ಇದರ ರುಚಿ ನಿಮಗೆ ಗೊತ್ತೇ ಇದೆ. ಆದರೆ ನೀವೆಂದಾದರೂ ಗ್ರೀನ್ ಚಟ್ನಿ ಸ್ಯಾಂಡ್ವಿಚ್ ಸವಿದಿದ್ದೀರಾ? ಇಲ್ಲ ಅಂದರೆ ಇವತ್ತೇ ಮನೆಯಲ್ಲಿ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು:
ಕೊತ್ತಂಬರಿ ಸೊಪ್ಪು – 1 ಕಪ್
ತೆಂಗಿನಕಾಯಿ ತುರಿ – ಕಾಲು ಕಪ್
ಹಸಿರು ಮೆಣಸಿನಕಾಯಿ – 2-3
ಸಕ್ಕರೆ – 1 ಟೀಸ್ಪೂನ್
ನೀರು – 2-3 ಟೀಸ್ಪೂನ್
ನಿಂಬೆ ರಸ – ಕಾಲು ಟೀಸ್ಪೂನ್
ಉಪ್ಪು – ಚಿಟಿಕೆ
ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸರ್ ಜಾರ್ಗೆ ಕೊತ್ತಂಬರಿ ಸೊಪ್ಪು, ತುರಿದ ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಸಕ್ಕರೆ, ನಿಂಬೆ ರಸ ಮತ್ತು ಉಪ್ಪು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ಇದಕ್ಕೆ 2-3 ಟೀಸ್ಪೂನ್ ನೀರು ಸೇರಿಸಿ ಮಿಶ್ರಣ ಮಾಡಿ. ಹೆಚ್ಚು ನೀರು ಸೇರಿಸಬೇಡಿ.
ಈಗ ಬ್ರೆಡ್ ಸ್ಲೈಸ್ಗಳನ್ನು ತೆಗೆದುಕೊಂಡು ಅದರ ಒಂದು ಬದಿಗೆ ಸ್ವಲ್ಪ ಬೆಣ್ಣೆಯ ಹಾಕಿ. ಅದರ ಮೇಲೆ ಒಂದು ಟೀಸ್ಪೂನ್ನಷ್ಟು ಗ್ರೀನ್ ಚಟ್ನಿ ಹರಡಿ. ಎಲ್ಲಾ ಬ್ರೆಡ್ಗೂ ಇದೇ ರೀತಿ ಮಾಡಿ, 2-3 ಬ್ರೆಡ್ ಸ್ಲೈಸ್ಗಳನ್ನು ಜೋಡಿಸಿದರೆ ಗ್ರೀನ್ ಚಟ್ನಿ ಸ್ಯಾಂಡ್ವಿಚ್ ರೆಡಿ.