ಪ್ರತಿ ಮನೆಯಲ್ಲೂ ಸಾಮಾನ್ಯವಾಗಿ ಮಾಡುವ ಬೆಳಗ್ಗಿನ ತಿಂಡಿ ಇಡ್ಲಿ.ಇದಕ್ಕೆಹೊಸ ರುಚಿ ನೀಡಬೇಕೆಂದರೆ, ‘ಆಲೂ ಇಡ್ಲಿ’ ತಯಾರಿಸಬಹುದು. ವಿಶೇಷವಾಗಿ ಮಕ್ಕಳಿಗೆ ಆಲೂ ಇಡ್ಲಿ ತುಂಬ ಇಷ್ಟವಾಗುತ್ತೆ. ಬೆಳಿಗ್ಗೆ ಉಪಾಹಾರಕ್ಕೂ, ಸಂಜೆ ಸ್ನ್ಯಾಕ್ಗೂ ಬಹಳ ಸೂಕ್ತವಾಗಿದೆ.
ಬೇಕಾಗುವ ಪದಾರ್ಥಗಳು
1 ಆಲೂಗಡ್ಡೆ
2 ಚಮಚ ಎಣ್ಣೆ
½ ಟೀಸ್ಪೂನ್ ಸಾಸಿವೆ
½ ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಕಡಲೆ ಬೇಳೆ
ಹಿಂಗ್
ಸ್ವಲ್ಪ ಕರಿಬೇವು ಎಲೆಗಳು , ಕತ್ತರಿಸಿದ್ದು
2 ಮೆಣಸಿನಕಾಯಿಗಳು , ಸಣ್ಣಗೆ ಹೆಚ್ಚಿದ್ದು
1 ಕಪ್ ರವೆ / ಸೂಜಿ
½ ಕಪ್ ಮೊಸರು
½ ಟೀಸ್ಪೂನ್ ಉಪ್ಪು
2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು , ನುಣ್ಣಗೆ ಕತ್ತರಿಸಿದ್ದು
¼ ಕಪ್ ನೀರು
½ ಟೀಸ್ಪೂನ್ ಇನೋ
ಉಪ್ಪು
ಮಾಡುವ ವಿಧಾನ
ಮೊದಲಿಗೆ, ಆಲೂಗಡ್ಡೆ ಮತ್ತು ¼ ಕಪ್ ನೀರನ್ನು ಬ್ಲೆಂಡರ್ ನಲ್ಲಿ ಹಾಕಿ, ನಯವಾದ ಪೇಸ್ಟ್ ಆಗುವವರೆಗೆ ರುಬ್ಬಿಕೊಳ್ಳಿ.
ಈಗ ದೊಡ್ಡ ಕಡಾಯಿಯಲ್ಲಿ ಎಣ್ಣೆ ಹಾಕಿ, ಸಾಸಿವೆ,ಜೀರಿಗೆ, ಕಡಲೆ ಬೇಳೆ, ಚಿಟಿಕೆ ಹಿಂಗ್, ಕರಿಬೇವು ಮತ್ತು ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ. ಈಗ 1 ಕಪ್ ರವೆ ಸೇರಿಸಿ, ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಹುರಿಯಿರಿ. ಇದನ್ನು ತಣ್ಣಗಾಗಲು ಬಿಡಿ.
ಈಗ ತಯಾರಾದ ಆಲೂಗಡ್ಡೆ ಪ್ಯೂರಿ, ಮೊಸರು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ,15 ನಿಮಿಷಗಳ ಕಾಲ ಬಿಡಿ. ನಂತರ ಈ ಮಿಶ್ರಣಕ್ಕೆ ಬೇಕಾದ್ಷ್ಟು ನೀರು ಸೇರಿಸಿ ಹದ ನೋಡಿಕೊಳ್ಳಿ.
ಹಬೆಗೆ ಇಡುವ ಮೊದಲು ಹಿಟ್ಟಿಗೆ ಇನೋ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ, ಇಡ್ಲಿ ತಟ್ಟೆಯಲ್ಲಿ ಹಿಟ್ಟು ಹಾಕಿ ಇಡ್ಲಿಯನ್ನು 15 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದರೆ ಆಲೂ ಇಡ್ಲಿ ರೆಡಿ.