ಉತ್ತರ ಭಾರತದ ಅತೀ ಜನಪ್ರಿಯ ಮತ್ತು ರುಚಿಕರ ಉಪಾಹಾರ ಪಾಕವಿಧಾನಗಳಲ್ಲಿ ಮೊದಲಿಗೆ ಹೆಸರಾಗುವುದು ‘ಗೋಬಿ ಪರಾಠ’. ಮಳೆಯ ದಿನಗಳಲ್ಲಿ ಬಿಸಿ ಗೋಬಿ ಪರಾಠವನ್ನು ಮೊಸರು ಅಥವಾ ಟೊಮೇಟೊ ಚಟ್ನಿಯೊಂದಿಗೇ ಸವಿದರೆ ಅದ್ಭುತ ರುಚಿ.
ಬೇಕಾಗುವ ಪದಾರ್ಥಗಳು
ಗೋಧಿಹಿಟ್ಟು – 2 ಕಪ್
ಉಪ್ಪು – ಸ್ವಲ್ಪ
ನೀರು – ಅಗತ್ಯಕ್ಕೆ ತಕ್ಕಷ್ಟು
ತುಪ್ಪ ಅಥವಾ ಎಣ್ಣೆ – 1 ಚಮಚ
ತುರಿದ ಗೋಬಿ – 1.5 ಕಪ್
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಜೀರಿಗೆ ಪುಡಿ – ½ ಚಮಚ
ಧನಿಯಾ ಪುಡಿ – 1 ಚಮಚ
ಗರಂ ಮಸಾಲಾ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – 1 ಚಮಚ
ತಯಾರಿ ವಿಧಾನ:
ಮೊದಲಿಗೆ ಗೋಧಿಹಿಟ್ಟಿಗೆ ಉಪ್ಪು ಮತ್ತು ನೀರು ಸೇರಿಸಿ ನಯವಾಗಿ ಕಲೆಸಿ, 15 ನಿಮಿಷ ಮುಚ್ಚಿಡಿ.
ಈಗ ತುರಿದ ಗೋಬಿಗೆ ಸ್ವಲ್ಪ ಉಪ್ಪು ಹಾಕಿ, ನೀರು ಹಿಂದಿ ತೆಗೆಯಿರಿ. ಬಾಣಲೆಯಲ್ಲಿ ಎಣ್ಣೆ ಹಾಕಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿದು, ನಂತರ ಗೋಭಿ ಸೇರಿಸಿ ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲಾ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
ಹಿಟ್ಟನ್ನು ಉಂಡೆ ಮಾಡಿ ಮಧ್ಯದಲ್ಲಿ ಸ್ಟಫ್ಫಿಂಗ್ ಹಾಕಿ ಮುಚ್ಚಿ, ಚಪಾತಿಯಂತೆ ಲಟ್ಟಿಸಿಕೊಂಡು,ತವಾದ ಮೇಲೆ ತುಪ್ಪ ಹಾಕಿ ಎರಡೂ ಬದಿಗೆ ಬೇಯಿಸಿಕೊಂಡರೆ ಗೋಬಿ ಪರಾಠ ರೆಡಿ.