ಕೆಎಫ್‌ಸಿ ಚಿಕನ್ ಎಲ್ಲರಿಗೂ ಇಷ್ಟಾನೇ. ಆದ್ರೆ ಹೊರಗಡೆ ಹೋಗಿ ತಿನ್ನುವುದರಿಂದ ಬೇಕಾದಷ್ಟು ಆರೋಗ್ಯ ಸಮಸ್ಯೆಗೆಳು ಬರಬಹುದು. ಹೀಗಾಗಿ ಇವತ್ತು ನಾವು ಮನೇಲೇ ಕೆಎಫ್‌ಸಿ ತರಹದ ಫ್ರೈಡ್ ಚಿಕನ್ ತಯಾರಿಸುವುದು ಹೇಗೆ ಅನ್ನೋದು ನೋಡೋಣ.
ಬೇಕಾಗುವ ಪದಾರ್ಥಗಳು:
1/2 ಕೆಜಿ ಕೋಳಿ,
1 ಕಪ್ ಕಾರ್ನ್ ಹಿಟ್ಟು,
1 ಕಪ್ ಆಲಿವ್ ಎಣ್ಣೆ,
1 ಕಪ್ ಪುಡಿ ಮಾಡಿದ ಕಾರ್ನ್‌ಫ್ಲೇಕ್,
2 ಮೊಟ್ಟೆ,
1 ಚಮಚ ಚಿಲ್ಲಿ ಫ್ಲೇಕ್ಸ್,
1 ಚಮಚ ಬೇಸಿಲ್,
ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ
ಮೊದಲಿಗೆ, ಮೊಟ್ಟೆಯನ್ನು ಒಡೆದು ಚೆನ್ನಾಗಿ ಕಲಕಿ ಈ ಮೊಟ್ಟೆ ಮಿಶ್ರಣಕ್ಕೆ ಸ್ವಚ್ಛಗೊಳಿಸಿದ ಕೋಳಿ ತುಂಡುಗಳನ್ನು ಅದ್ದಿ ಇಟ್ಟುಕೊಳ್ಳಿ.
ಈಗ ಒಂದು ಬಟ್ಟಲಿನಲ್ಲಿ ಕಾರ್ನ್ ಹಿಟ್ಟು ಅಥವಾ ಜೋಳದ ಹಿಟ್ಟು ಮತ್ತು ಮಸಾಲೆಗಳನ್ನು ಬೆರೆಸಿ ಒಟ್ಟಿಗೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ಮೊಟ್ಟೆಯಲ್ಲಿ ಅದ್ದಿದ್ದ ಚಿಕನ್ ಅನ್ನು ಹಿಟ್ಟಿನ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಲೇಪಿಸಿ. ನಂತರ ಅದನ್ನು ಮತ್ತೊಮ್ಮೆ ಮೊಟ್ಟೆಯ ಮಿಶ್ರಣದಲ್ಲಿ ಅದ್ದಿ. ನಂತರ ಕಾರ್ನ್ ಫ್ಲೇಕ್ ಪುಡಿಗೆ ಚಿಕನ್ ಅನ್ನು ಮತ್ತೊಮ್ಮೆ ಅದ್ದಿ.
ಈಗ ಎಣ್ಣೆ ಬಿಸಿ ಮಾಡಿ ಒಂದೊಂದೇ ಚಿಕನ್ ತುಂಡುಗಳನ್ನು ಹಾಕಿ 2 ಬದಿಯೂ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿದ್ರೆ ಹೋಂ ಮೇಡ್ ಕೆಎಫ್‌ಸಿ ಫ್ರೈಡ್ ಚಿಕನ್ ರೆಡಿ.