ಮಧ್ಯಾಹ್ನ ಊಟಕ್ಕೆ ಅನ್ನ, ಸಾಂಬಾರ್ ಜೊತೆಗೆ ರುಚಿಕರವಾದಒಂದು ಸೈಡ್ ಡಿಶ್ ಎಂದರೆ ಅದು ಬಂಗುಡೆ ಪೆಪ್ಪರ್ ಫ್ರೈ. ಮಟನ್ ಅಥವಾ ಚಿಕನ್ ಫ್ರೈಗೆ ಪರ್ಯಾಯವಾಗಿ ಈ ಫಿಶ್ ಫ್ರೈ ಕೂಡ ನಿಮ್ಮ ಭೋಜನಕ್ಕೆ ಹೊಸ ರುಚಿಯನ್ನ ನೀಡುತ್ತದೆ.
ಬೇಕಾಗುವ ಪದಾರ್ಥಗಳು:
ಬಂಗುಡೆ ಮೀನು – ಅರ್ಧ ಕೆಜಿ
ಕಾಳುಮೆಣಸಿನ ಪುಡಿ – 1 ಚಮಚ
ಸೋಂಪು ಪುಡಿ – 1 ಚಮಚ
ಕರಿಬೇವು- ಸ್ವಲ್ಪ
ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
ಅಡುಗೆ ಎಣ್ಣೆ- 2 ಚಮಚ
ಗರಂ ಮಸಾಲೆ- ಅರ್ಧ ಚಮಚ
ನಿಂಬೆರಸ – 1 ಚಮಚ
ಅರಿಶಿಣ – ಸ್ವಲ್ಪ
ಖಾರದಪುಡಿ – ಅರ್ಧ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಜೀರಿಗೆ ಪೌಡರ್- ಅರ್ಧ ಚಮಚ
ಮಾಡುವ ವಿಧಾನ:
ಮೊದಲಿಗೆ ಬಂಗುಡೆ ಮೀನನ್ನು ಚೆನ್ನಾಗಿ ತೊಳೆಯಬೇಕು. ನಂತರ ಒಂದು ಬಟ್ಟಲಿನಲ್ಲಿ ನಿಂಬೆರಸ, ಅರಿಶಿಣ, ಉಪ್ಪು, ಖಾರದಪುಡಿ, ಜೀರಿಗೆ, ಕಾಳುಮೆಣಸು, ಸೋಂಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಗರಂ ಮಸಾಲೆ ಹಾಕಿ ಮಿಶ್ರಣ ತಯಾರಿಸಿಕೊಳ್ಳಿ.
ಈ ಮಸಾಲೆಯ ಮಿಶ್ರಣವನ್ನು ಮೀನು ಮೇಲೆ ಚೆನ್ನಾಗಿ ಲೇಪಿಸಿ 15-20 ನಿಮಿಷ ಮ್ಯಾರಿನೇಟ್ ಮಾಡಿ. ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ, ಮಸಾಲೆ ಲೇಪಿತ ಮೀನಿನ ತುಂಡುಗಳನ್ನು ಹಾಕಿ ಎರಡೂ ಕಡೆ ಚನ್ನಾಗಿ ಬೇಯಿಸಿ. ಕೊನೆಗೆ ಕಾಳುಮೆಣಸಿನ ಪುಡಿ ಮತ್ತು ಕರಿಬೇವು ಉದುರಿಸಿದರೆ, ಗರಿಗರಿ ಬಂಗುಡೆ ಪೆಪ್ಪರ್ ಫ್ರೈ ಸಿದ್ಧ!