ಸಂಜೆ ಕಾಫಿ ಜೊತೆಗೆ ಏನಾದ್ರು ಕುರುಕಲು ತಿಂಡಿ ಬೇಕು ಅಂತ ನಾಲಿಗೆ ಕೇಳ್ತಿರುತ್ತೆ ಅಲ್ವಾ ಅದಿಕ್ಕೆ ಇವತ್ತು ಸ್ವಲ್ಪ ಡಿಫ್ರೆಂಟ್ ಆಗಿರೋ ಶಾವಿಗೆ ಪಕೋಡ ಮಾಡೋದು ಹೇಗೆ ಅಂತ ಹೇಳಿಕೊಡ್ತೀವಿ ನೋಡಿ.
ಬೇಕಾಗುವ ಪದಾರ್ಥಗಳು
ಶಾವಿಗೆ – 2ಕಪ್
ಕಡಲೆಹಿಟ್ಟು – 1ಕಪ್
ಈರುಳ್ಳಿ – 2 (ಉದ್ದಕ್ಕೆ ಹೆಚ್ಚಿದ್ದು)
ಹಸಿಮೆಣಸು – 4 ಚಿಕ್ಕದಾಗಿ ಹೆಚ್ಚಿದ್ದು
ಕರಿಬೇವಿನ ಎಲೆ – ಒಂದು ಮುಷ್ಟಿ
ಅಡುಗೆ ಸೋಡಾ – ಕಾಲು ಚಮಚ
ಖಾರದಪುಡಿ – 2ಚಮಚ
ಚಾಟ್ ಮಸಾಲ – 1ಚಮಚ
ಕೊತ್ತಂಬರಿ ಸೊಪ್ಪು – ಅರ್ಧ ಮುಟ್ಟಿಯಾಗುವಷ್ಟು
ಉಪ್ಪು – ಚಿಟಿಕೆ
ಎಣ್ಣೆ – ಕರಿಯಲು
ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿಯುತ್ತಿರುವಾಗ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ನಂತರ ಶಾವಿಗೆ ಸೇರಿಸಿ. ಶಾವಿಗೆಯನ್ನು 4 ನಿಮಿಷಗಳ ಕಾಲ ಬೇಯಿಸಿ.
ತಣ್ಣಗಾದ ಶಾವಿಗೆಯನ್ನು ಒಂದು ಅಗಲ ಪಾತ್ರೆಗೆ ಹಾಕಿ. ಅದಕ್ಕೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಕರಿಬೇವು, ಖಾರದಪುಡಿ, ಕಡಲೆಹಿಟ್ಟು, ಅಡುಗೆಸೋಡಾ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಚಾಟ್ ಮಸಾಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಬೇಕಿದ್ದರೆ ನೀರು ಸೇರಿಸಿಕೊಳ್ಳಿ. ಇದು ಪಕೋಡದಂತೆ ರೆಡಿಯಾದ ಮೇಲೆ ಬಿಸಿ ಎಣ್ಣೆಗೆ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿದರೆ ಶಾವಿಗೆ ಪಕೋಡ ತಿನ್ನಲು ರೆಡಿ.