FOOD | 5 ನಿಮಿಷದಲ್ಲಿ ತಯಾರಾಗುತ್ತೆ ಈರುಳ್ಳಿ ಪಲ್ಯ! ಮಾಡೋದು ಸುಲಭ, ತಿನ್ನೋಕೆ ಬಲು ರುಚಿ!

ಊಟದ ಜೊತೆ ಸೈಡ್ ಡಿಶ್ ಏನಾದ್ರು ಬೇಕು ಅಂದಾಗ 5 ನಿಮಿಷದಲ್ಲಿ ಈ ಈರುಳ್ಳಿ ಪಲ್ಯ ಮಾಡಿಕೊಳ್ಳಬಹುದು. ರೆಸಿಪಿ ಇಲ್ಲಿದೆ..

ಬೇಕಾಗುವ ಸಾಮಗ್ರಿಗಳು:

ಎಣ್ಣೆ- ಸ್ವಲ್ಪ
ಜೀರಿಗೆ- ಸ್ವಲ್ಪ
ಸಾಸಿವೆ- ಸ್ವಲ್ಪ
ಕರಿಬೇವು- ಸ್ವಲ್ಪ
ಈರುಳ್ಳಿ – 4
ಟೊಮೆಟೋ- 1
ಅರಶಿಣ ಪುಡಿ- ಸ್ವಲ್ಪ
ಹಸಿ ಮೆಣಸಿನಕಾಯಿ- 5
ಕೊತ್ತಂಬರಿ ಸೊಪ್ಪು- ಸ್ವಲ್ಪ
ತೆಂಗಿನ ತುರಿ- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು ಬಾಣಲೆಗೆ ಎಣ್ಣೆ ಹಾಕಿಕೊಡು ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಸಾಸಿವೆ, ಜೀರಿಗೆ ಹಾಕಿ ನಂತರ ಕರಿಬೇವು ಹಾಕಿ ಕೆಂಪಗೆ ಮಾಡಿಕೊಳ್ಳಿ. ನಂತರ ಸಣ್ಣದಾಗಿ ಸ್ಲೈಸ್ ಮಾಡಿಕೊಂಡಿರುವ ಈರುಳ್ಳಿ, ಟೊಮೆಟೋ, ಹಸಿಮೆಣಸಿನ ಕಾಯಿ, ಉಪ್ಪು ಹಾಕಿ 2 ನಿಮಿಷ ಫ್ರೈ‍ ಮಾಡಿಕೊಳ್ಳಿ.

ಬಳಿಕ ಅರಶಿನ ಪುಡಿ ಕೂಡ ಹಾಕಿಕೊಂಡು 2 ರಿಂದ 3 ನಿಮಿಷ ಫ್ರೈ ಮಾಡಿಕೊಳ್ಳಬೇಕು. 3 ನಿಮಿಷದ ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪು ಹಾಗೂ ತೆಂಗಿನ ತುರಿ ಹಾಕಿ ಮಿಶ್ರಣ ಮಾಡಿದರೆ ಈರುಳ್ಳಿ ಪಲ್ಯ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!