FOOD | ಆಲೂಗಡ್ಡೆ-ಅವಲಕ್ಕಿ ಕಟ್ಲೆಟ್! ಸಂಜೆ ಸ್ನಾಕ್ಸ್​​ಗೆ ಹೇಳಿಮಾಡಿಸಿದಂತಿದೆ! ನೀವೂ ಒಮ್ಮೆ ಟ್ರೈ ಮಾಡಿ

ಸಂಜೆಯ ಕಾಫಿ-ಟಿ ಸಮಯದಲ್ಲಿ ಬಹುತೇಕರು ಏನಾದರೂ ರುಚಿಕರ ತಿಂಡಿ ತಿನ್ನಲು ಬಯಸುತ್ತಾರೆ. ಎಣ್ಣೆ ಹೆಚ್ಚು ಇರುವ ತಿನಿಸುಗಳನ್ನು ಪ್ರತಿದಿನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹ ಸಂದರ್ಭಗಳಲ್ಲಿ ಅವಲಕ್ಕಿ ಮತ್ತು ಆಲೂಗಡ್ಡೆಯಿಂದ ತಯಾರಿಸಬಹುದಾದ ಕಟ್ಲೆಟ್ ಉತ್ತಮ ಪರ್ಯಾಯವಾಗಿದೆ.

ಬೇಕಾಗುವ ಸಾಮಗ್ರಿಗಳು:

1 ಕಪ್ ಅವಲಕ್ಕಿ
2 ಮಧ್ಯಮ ಗಾತ್ರದ ಆಲೂಗಡ್ಡೆ
1 ಈರುಳ್ಳಿ
½ ಕಪ್ ಹಸಿರು ಮತ್ತು ಹಳದಿ ಕ್ಯಾಪ್ಸಿಕಂ
1 ಟೀಸ್ಪೂನ್ ಶುಂಠಿ-ಹಸಿಮೆಣಸಿನಕಾಯಿ ಪೇಸ್ಟ್
½ ಟೀಸ್ಪೂನ್ ಅಚ್ಚಖಾರದ ಪುಡಿ
½ ಟೀಸ್ಪೂನ್ ಜೀರಿಗೆ ಪುಡಿ
½ ಟೀಸ್ಪೂನ್ ಧನಿಯಾ ಪುಡಿ
½ ಟೀಸ್ಪೂನ್ ಗರಂ ಮಸಾಲಾ
½ ಟೀಸ್ಪೂನ್ ಚಾಟ್ ಮಸಾಲಾ
2 ಟೇಬಲ್‌ಸ್ಪೂನ್ ಅಕ್ಕಿ ಹಿಟ್ಟು (ಬೈಂಡಿಂಗ್‌ಗಾಗಿ)
2 ಟೇಬಲ್‌ಸ್ಪೂನ್ ಹುರಿದ ಕಡಲೆ ಬೀಜದ ತರಿತರಿಯಾದ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
2 ಟೇಬಲ್‌ಸ್ಪೂನ್ ಕೊತ್ತಂಬರಿ ಸೊಪ್ಪು
ಎಳ್ಳು – ಸ್ವಲ್ಪ
ಎಣ್ಣೆ – ಫ್ರೈ ಮಾಡಲು

ತಯಾರಿಸುವ ವಿಧಾನ:

ಮೊದಲು ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿ, ನೀರನ್ನು ತೆಗೆದು ಚೆನ್ನಾಗಿ ಮ್ಯಾಶ್ ಮಾಡಬೇಕು. ಅದಕ್ಕೆ ಬೇಯಿಸಿ ತುರಿದ ಆಲೂಗಡ್ಡೆ ಸೇರಿಸಿ ಚೆನ್ನಾಗಿ ಕಲಸಿ. ನಂತರ ಇದಕ್ಕೆ ಈರುಳ್ಳಿ, ಕ್ಯಾಪ್ಸಿಕಂ, ಶುಂಠಿ-ಹಸಿಮೆಣಸಿನಕಾಯಿ ಪೇಸ್ಟ್, ಪುಡಿಮಸಾಲೆಗಳು, ಅಕ್ಕಿ ಹಿಟ್ಟು, ಕಡಲೆ ಬೀಜದ ಪುಡಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಬೇಕು.

ಈ ಮಿಶ್ರಣದಿಂದ ಸಣ್ಣ ಕಟ್ಲೆಟ್ ಆಕಾರದಲ್ಲಿ ತಯಾರಿಸಿ, ಮೇಲೆ ಎಳ್ಳು ಹಾಕಿ ಸ್ವಲ್ಪ ಒತ್ತಿ. ಈಗ ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿದರೆ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!