ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಹೊಟೇಲ್ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಹೊಟೇಲ್‌ಗಳಲ್ಲಿ ಇನ್ಮುಂದೆ ಕಾಫಿ, ಟೀ, ತಿಂಡಿ, ಊಟದ ದರ ಕೂಡ ಹೆಚ್ಚಳವಾಗಲಿದೆ.
ಒಂದು ವಾರದಿಂದ ರಾಜಧಾನಿಯ ಹೊಟೇಲ್ ಗಳಲ್ಲಿ ದರ ಏರಿಕೆಯಾಗಿರುವುದು ಕಂಡುಬಂದಿದೆ. ಹೊಟೇಲ್ ಮಾಲೀಕರ ಸಂಘ ದರ ಹೆಚ್ಚಳಕ್ಕೆ ಸೂಚನೆ ನೀಡದಿದ್ರು ಕೂಡ ಕೆಲ ಹೋಟೆಲ್ ಮಾಲೀಕರೇ ವಿದ್ಯುತ್ ದರ ಏರಿಕೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ಹೋಟೆಲ್ ಗಳಲ್ಲಿ ದರ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.
ವಿದ್ಯುತ್ ದರ ಏರಿಕೆ ಹಿನ್ನೆಲೆ ಎಲ್ಲಾ ಹೋಟೆಲ್ ಗಳಲ್ಲಿ ಊಟ, ತಿಂಡಿ, ಕಾಫಿ ದರವನ್ನು ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.