ಬೆಳಗಿನ ಉಪಾಹಾರ ನಮ್ಮ ದೈನಂದಿನ ದಿನಚರಿಯಲ್ಲಿ ಅತ್ಯಂತ ಮುಖ್ಯವಾದ ಒಂದು ಆಹಾರವಾಗಿದೆ. ದಿನದ ಪ್ರಾರಂಭದಲ್ಲಿ ಪೋಷಕಾಂಶಗಳಲ್ಲಿ ಸಮೃದ್ಧವಾದ ಆಹಾರ ತೆಗೆದುಕೊಳ್ಳುವುದರಿಂದ ದೀರ್ಘಕಾಲ ಶಕ್ತಿ ನೀಡುತ್ತದೆ. ಇವತ್ತು ಕಾಬುಲ್ ಕಡಲೆಕಾಯಿ ಸಲಾಡ್ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು:
ಒಂದು ಕಪ್ ಬೇಯಿಸಿದ ಕಡಲೆಕಾಯಿ
ಅರ್ಧ ಕಪ್ ಸೌತೆಕಾಯಿ
ಅರ್ಧ ಕಪ್ ಈರುಳ್ಳಿ
ಅರ್ಧ ಕಪ್ ಟೊಮೆಟೊ
ಅರ್ಧ ಕಪ್ ಬೇಳೆಕಾಳು
ಎರಡು ಹಸಿ ಮೆಣಸಿನಕಾಯಿ
ಅರ್ಧ ಕಪ್ ಕೊತ್ತಂಬರಿ ಸೊಪ್ಪು
ಒಂದು ಕಪ್ ಮೊಸರು
ಎರಡು ಚಮಚ ಎಣ್ಣೆ
ನಿಂಬೆ ರಸ
ಅರ್ಧ ಚಮಚ ಮೆಣಸಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಕಡಲೆಕಾಳನ್ನು ರಾತ್ರಿಯಿಡೀ ನೆನೆಸಬೇಕು. ಮರುದಿನ ಬೆಳಗ್ಗೆ ನೆನೆಸಿದ ಕಡಲೆಕಾಳನ್ನು ಬೇಯಿಸಿ.ಅದರಲ್ಲಿನ ನೀರನ್ನು ಸೋಸಿ ಪಕ್ಕಕ್ಕೆ ಇರಿಸಿ.
ಈಗ ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಬೇಳೆಕಾಳುಗಳನ್ನು ಹಾಕಿ ಹುರಿಯಿರಿ. ಒಲೆಯನ್ನು ಆಫ್ ಮಾಡಿ ನಂತರ ತಣ್ಣಗಾಗಲು ಬಿಡಿ. ಈಗ ಒಂದು ದೊಡ್ಡ ಪಾತ್ರೆ ತೆಗೆದುಕೊಂಡು ಅದರಲ್ಲಿ ಬೇಯಿಸಿದ ಕಡಲೆಕಾಳನ್ನು ಹಾಕಿ. ನಂತರ ಕತ್ತರಿಸಿದ ಸೌತೆಕಾಯಿ, ಟೊಮೆಟೊ, ನುಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಹಾಕಿ ಮಿಶ್ರಣ ಮಾಡಿ. ನಂತರ ಹುರಿದ ಬೇಳೆಕಾಳುಗಳು, ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿ.
ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಕಪ್ಪು ಮೊಸರು, ಎರಡು ಚಮಚ ಎಣ್ಣೆ, ಒಂದು ಚಮಚ ನಿಂಬೆ ರಸ, ಅರ್ಧ ಚಮಚ ಮೆಣಸಿನ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮೊಸರು ಮಿಶ್ರಣವನ್ನು ಕಡಲೆಕಾಳು ಮಿಶ್ರಣಕ್ಕೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿದರೆ ಆರೋಗ್ಯಕರವಾದ ಕಡಲೆಕಾಳು ಸಲಾಡ್ ರೆಡಿ.