Saturday, November 8, 2025

FOOD | ಸಿಂಪಲ್ ಆಗಿ ಮಾಡಿ ಆರೋಗ್ಯಕರ ಗಾರ್ಲಿಕ್ ಚಿಕನ್! ರೆಸಿಪಿ ಇಲ್ಲಿದೆ

ಚಿಕನ್ ಅನ್ನು ನಾವು ಹಲವಾರು ರೀತಿಯಲ್ಲಿ ರೆಸಿಪಿಗಳಾಗಿ ತಯಾರಿಸುತ್ತೇವೆ. ಕಬಾಬ್, ಪೆಪ್ಪರ್ ಚಿಕನ್, ಬಿರಿಯಾನಿ ಮತ್ತು ಇನ್ನೂ ಅನೇಕ. ಆದರೆ, ಈ ಗಾರ್ಲಿಕ್ ಚಿಕನ್ ರೆಸಿಪಿ ಸುಲಭವಾಗಿದ್ದು, ತಯಾರಿಸಲು ಹೆಚ್ಚು ಸಮಯವೂ ತೆಗೆದುಕೊಳ್ಳುವುದಿಲ್ಲ.

ಬೇಕಾಗುವ ಸಾಮಾಗ್ರಿಗಳು:

ಚಿಕನ್
ಬೆಳ್ಳುಳ್ಳಿ
ಈರುಳ್ಳಿ
ಹಸಿಮೆಣಸಿನಕಾಯಿ
ಶುಂಠಿ
ಕರಿ ಮೆಣಸು
ಅರಿಶಿನ ಪುಡಿ
ಉಪ್ಪು
ಎಣ್ಣೆ
ಕೊತ್ತಂಬರಿ ಸೊಪ್ಪು
ನಿಂಬೆ ರಸ

ಮಾಡುವ ವಿಧಾನ:

ಚಿಕನ್ ಸಣ್ಣದಾಗಿ ಕತ್ತರಿಸಿ ಬೌಲ್‌ನಲ್ಲಿ ಹಾಕಿ. ಇದಕ್ಕೆ ಉಪ್ಪು, ಅರಿಶಿನ ಪುಡಿ, ಕಪ್ಪು ಮೆಣಸು ಪುಡಿ, ಅರ್ಧ ಬೆಳ್ಳುಳ್ಳಿ, ಅರ್ಧ ಶುಂಠಿ ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 30 ನಿಮಿಷ ಮ್ಯಾರಿನೇಟ್ ಆಗಲು ಬಿಡಿ.

ಈಗ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಮೊದಲು ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಹುರಿಯಿರಿ. ನಂತರ ಈರುಳ್ಳಿ ಮತ್ತು ಸಣ್ಣದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ ಸ್ವಲ್ಪ ಹುರಿಸಿ. ನಂತರ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ನಂತರ ಸ್ವಲ್ಪ ನೀರು ಹಾಕಿ ಮುಚ್ಚಿ 10–15 ನಿಮಿಷ ಬೇಯಿಸಿ.

ಈಗ ಬೇಯಿಸಿದ ಚಿಕನ್ ಮೇಲೆ ಕೊನೆಗೆ ಮತ್ತಷ್ಟು ಬೆಳ್ಳುಳ್ಳಿ ಹಾಕಿ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಸೇರಿಸಿ ಚೆನ್ನಾಗಿ ಹುರಿಯಿರಿ. ಕೊನೆಗೆ, ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ. ಬಿಸಿ ಬಿಸಿ ಚಪಾತಿ, ಪರೋಟಾ ಅಥವಾ ಅನ್ನದ ಜೊತೆಗೆ ಈ ಗಾರ್ಲಿಕ್ ಚಿಕನ್ ಸವಿಯಿರಿ.

error: Content is protected !!