FOOD | ಸಿಂಪಲ್ ಅಂಡ್ ಟೇಸ್ಟಿ ಬ್ರೇಕ್ ಫಾಸ್ಟ್ ಜೀರಾ ರೈಸ್! ಮಾಡೋದು ತುಂಬಾ ಸುಲಭ

ತಕ್ಷಣ ಬ್ರೇಕ್ ಫಾಸ್ಟ್ ಬೇಕಂದ್ರೆ ಜೀರಾ ರೈಸ್ ಮಾಡ್ಕೊಳ್ಳಿ. ಬಾಸ್ಮತಿ ಅಕ್ಕಿಯಿಂದ ತಯಾರಿಸಲಾಗುವ ಈ ಸಾದಾ ಆದರೆ ಅತ್ಯುತ್ತಮ ರುಚಿಯ ಈ ಉಪಹಾರವನ್ನು ಮೊಸರು ಬಜ್ಜಿ ಜೊತೆಗೂ ಸವಿಯಬಹುದು ಅಥವಾ ಹಾಗೇನೂ ತಿನ್ನಬಹುದು.

ಬೇಕಾಗುವ ಪದಾರ್ಥಗಳು:

1/2 ಕಪ್ ಬಾಸ್ಮತಿ ಅಕ್ಕಿ
1 ಚಮಚ ತುಪ್ಪ ಅಥವಾ ಎಣ್ಣೆ
2 ಟೀ ಚಮಚ ಜೀರಿಗೆ
1 ಸಣ್ಣ ಈರುಳ್ಳಿ
8-10 ಗೋಡಂಬಿ
1¼ ಕಪ್ ಬಿಸಿ ನೀರು
ಉಪ್ಪು

ಮಾಡುವ ವಿಧಾನ:

ಮೊದಲು 1 ಕಪ್ ಬಾಸ್ಮತಿ ಅಕ್ಕಿಯನ್ನು 15-20 ನಿಮಿಷಗಳ ಕಾಲ ತಣ್ಣನೆಯ ನೀರಿನಲ್ಲಿ ನೆನೆಸಿಡಿ. ನಂತರ ನೀರನ್ನು ಬಸಿದುಕೊಳ್ಳಿ.

ಒಂದು ದಪ್ಪ ತಳದ ಬಾಣಲೆಗೆ 1½ ಟೀ ಚಮಚ ತುಪ್ಪ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ. ಈಗ 6-7 ಗೋಡಂಬಿಗಳನ್ನು ಹಾಕಿ ಕಂಡು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಹುರಿದ ಮೇಲೆ ಗೋಡಂಬಿಗಳನ್ನು ಬೇರೆ ತಟ್ಟೆಗೆ ತೆಗೆದು ಇಡಿ.

ಅದೇ ಬಾಣಲೆಗೆ ½ ಟೀ ಚಮಚ ಜೀರಿಗೆ ಹಾಕಿ ಸಿಡಿದ ನಂತರ, 1 ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಸೇರಿಸಿ. ಈರುಳ್ಳಿಯು ತಿಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಈ ಈರುಳ್ಳಿಗೆ ತೊಳೆದ ಬಾಸ್ಮತಿ ಅಕ್ಕಿ ಸೇರಿಸಿ. 2-3 ನಿಮಿಷಗಳ ಕಾಲ ಮಿಶ್ರಣವನ್ನು ನಿಧಾನವಾಗಿ ಹುರಿಯಿರಿ.

ಈಗ 1¼ ಕಪ್ ಬಿಸಿ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮಧ್ಯಮ ಉರಿಯಲ್ಲಿ 2 ನಿಮಿಷಗಳ ಕಾಲ ಕುದಿಸಿರಿ. ನಂತರ ಮುಚ್ಚಳವಿಟ್ಟು ಉರಿಯನ್ನು ಕಡಿಮೆ ಮಾಡಿ 8-10 ನಿಮಿಷಗಳ ಕಾಲ ಅನ್ನವನ್ನು ಬೇಯಿಸಿ.

ಅನ್ನ ಸಂಪೂರ್ಣವಾಗಿ ಬೆಂದ ಬಳಿಕ ಉರಿಯನ್ನು ಆಫ್ ಮಾಡಿ, 8-10 ನಿಮಿಷಗಳ ಕಾಲ ಹಾಗೆಯೇ ಮುಚ್ಚಿ ಇಡಿ. ನಂತರ ಮುಚ್ಚಳ ತೆರೆದು ಅನ್ನವನ್ನು ಲೈಟಾಗಿ ಮಿಶ್ರಣ ಮಾಡಿ. ಕೊನೆಗೆ ಹುರಿದ ಗೋಡಂಬಿಗಳನ್ನು ಸೇರಿಸಿದರೆ ಜೀರಾ ರೈಸ್ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!