ಮಳೆಗಾಲದ ತಂಪಾದ ವಾತಾವರಣದಲ್ಲಿ ಬಿಸಿ ಬಿಸಿ ಅನ್ನದ ಜೊತೆ ರಸಂ ಸೇವಿಸಿದರೆ ಅದಕ್ಕಿಂತ ಅದ್ಭುತ ಅನುಭವವೇ ಇಲ್ಲ. ವಿಶೇಷವಾಗಿ ಟೊಮೆಟೊ ರಸಂ ಅಡುಗೆ ಮನೆಯಲ್ಲಿ ತಕ್ಷಣ ತಯಾರಾಗುವ ಪಾಕವಿಧಾನವಾಗಿದ್ದು, ಊಟಕ್ಕೆ ಹೆಚ್ಚುವರಿ ರುಚಿ ನೀಡುತ್ತದೆ.
ಬೇಕಾಗುವ ಪದಾರ್ಥಗಳು
ಮಧ್ಯಮ ಗಾತ್ರದ ಟೊಮೆಟೊ – 3
ಹುಣಸೆಹಣ್ಣು – ಸಣ್ಣ ನಿಂಬೆ ಗಾತ್ರದಷ್ಟು
ಶುಂಠಿ – ಒಂದು ಸಣ್ಣ ತುಂಡು
ಎಣ್ಣೆ – 2 ಟೀಸ್ಪೂನ್
ಕಡಲೆ ಬೇಳೆ – ½ ಟೀಸ್ಪೂನ್
ಮೆಂತ್ಯ ಬೀಜ – ಒಂದು ಚಿಟಿಕೆ
ಉದ್ದಿನ ಬೇಳೆ – ½ ಟೀಸ್ಪೂನ್
ಸಾಸಿವೆ, ಜೀರಿಗೆ – ತಲಾ ½ ಟೀಸ್ಪೂನ್
ಹಸಿಮೆಣಸಿನಕಾಯಿ – 3
ಇಂಗು – ¼ ಟೀಸ್ಪೂನ್
ಒಣ ಮೆಣಸಿನಕಾಯಿ – 2
ಕರಿಬೇವು – ಸ್ವಲ್ಪ
ಅರಿಶಿನ – ¼ ಟೀಸ್ಪೂನ್
ಉಪ್ಪು, ಮೆಣಸು – ರುಚಿಗೆ ತಕ್ಕಷ್ಟು
ಸಾಂಬಾರ್ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ತಯಾರಿಸುವ ವಿಧಾನ
ಮೊದಲು ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿ ರಸ ತೆಗೆಯಿರಿ. ಟೊಮೆಟೊವನ್ನು ತುಂಡುಗಳಾಗಿ ಕತ್ತರಿಸಿ, ಶುಂಠಿಯ ಜೊತೆಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ಈಗ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ, ಮೆಂತ್ಯ ಬೀಜ ಹುರಿದು, ಇಂಗು, ಹಸಿಮೆಣಸಿನಕಾಯಿ, ಒಣ ಮೆಣಸಿನಕಾಯಿ, ಕರಿಬೇವು ಹಾಕಿ. ಬಳಿಕ ಟೊಮೆಟೊ ಮಿಶ್ರಣವನ್ನು ಸೇರಿಸಿ, ಅರಿಶಿನ, ಉಪ್ಪು, ಸಾಂಬಾರ್ ಪುಡಿ, ಕೊತ್ತಂಬರಿ ಪುಡಿ ಹಾಕಿ ಚೆನ್ನಾಗಿ ಕಲೆಸಿ. ಹುಣಸೆ ರಸ ಹಾಗೂ ಬೇಕಾದಷ್ಟು ನೀರು ಸೇರಿಸಿ ಮಧ್ಯಮ ಉರಿಯಲ್ಲಿ ಕೆಲವು ನಿಮಿಷ ಕುದಿಸಿ, ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿದರೆ ಬಿಸಿ ಬಿಸಿ ರಸಂ ಸವಿಯಲು ಸಿದ್ಧ.