ಮನೆಯಲ್ಲೇ ಉಳಿದಿರುವ ಕೊಬ್ಬರಿಯನ್ನು ಸಿಹಿ ತಿನಿಸಾಗಿ ಬಳಸಲು ಕೊಬ್ಬರಿ ಲಡ್ಡು ಸುಲಭ ಮತ್ತು ರುಚಿಕರ ವಿಧಾನ. ಹಾಲು, ಸಕ್ಕರೆ ಮತ್ತು ತುಪ್ಪದ ಸುವಾಸನೆಗೆ ಏಲಕ್ಕಿ ಹಾಗೂ ಬಾದಾಮಿ ಸೇರಿ ಸಾಂಪ್ರದಾಯಿಕ ಸಿಹಿಯ ರುಚಿಯನ್ನು ನೀಡುತ್ತದೆ.
ಬೇಕಾಗುವ ಸಾಮಗ್ರಿಗಳು:
ತುರಿದ ಕೊಬ್ಬರಿ – 1 ಕಪ್
ಹಾಲು – ¾ ಲೀಟರ್
ಸಕ್ಕರೆ – ⅓ ಕಪ್
ತುಪ್ಪ – 2 ಟೀ ಚಮಚ
ಏಲಕ್ಕಿ ಪುಡಿ – 2 ಚಿಟಿಕೆ
ಬಾದಾಮಿ – ಅಲಂಕಾರಕ್ಕೆ
ತಯಾರಿಸುವ ವಿಧಾನ:
ಮೊದಲು ಪ್ಯಾನ್ ಬಿಸಿ ಮಾಡಿ, ತುರಿದ ಕೊಬ್ಬರಿಯನ್ನು ಹಾಕಿ ಬಂಗಾರದ ಬಣ್ಣ ಬರುವವರೆಗೂ ಹುರಿಯಿರಿ.
ಹುರಿದ ಕೊಬ್ಬರಿಗೆ ಹಾಲು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಕಡಿಮೆ ಉರಿಯಲ್ಲಿ ಮಿಶ್ರಣವನ್ನು ನಿಧಾನವಾಗಿ ಕುದಿಸಿ, ನೀರು ಹೀರಿಕೊಂಡು ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿರಿ.
ನಂತರ ತುಪ್ಪ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ. ಮಿಶ್ರಣ ಸೌಟಿಗೆ ಅಂಟದ ಮಟ್ಟಿಗೆ ಗಟ್ಟಿಯಾಗಬೇಕು. ನಂತರ ಸ್ಟೌವ್ ಆಫ್ ಮಾಡಿ, ಮಿಶ್ರಣ ಸ್ವಲ್ಪ ತಣ್ಣಗಾದ ಮೇಲೆ ಕೈಗೆ ತುಪ್ಪ ಸವರಿ ಉಂಡೆಗಳಾಗಿ ರೂಪಿಸಿ. ಪ್ರತಿಯೊಂದು ಲಡ್ಡಿಗೆ ಬಾದಾಮಿ ಅಲಂಕಾರ ಮಾಡಿ.