ಬೆಳಗ್ಗೆ ಎದ್ದಾಗ ತಿಂಡಿಗೆ ಏನ್ ಮಾಡೋದು ಅಂತಾನೆ ಯೋಚ್ನೆ ಆಗಿರುತ್ತೆ. ಆರೋಗ್ಯಕರನು ಆಗಿರ್ಬೇಕು ಬೇಗನೆ ರೆಡಿ ಆಗ್ಬೇಕು ಅಂತಹ ತಿಂಡಿ ಬೇಕು ಅಂದ್ರೆ ಒಮ್ಮೆ ಈ ರವೆ ವಡೆ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು
ರವೆ – 1 ಕಪ್
ನೀರು – 2 ಕಪ್
ಶುಂಠಿ – ಸಣ್ಣ ತುಂಡು
ಹಸಿ ಮೆಣಸಿನಕಾಯಿ – ಎರಡು ಅಥವಾ ಮೂರು
ಕಾಳುಮೆಣಸು – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು ಬೇಕಾದಷ್ಟು
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ. ಈ ನೀರಿಗೆ ನುಣ್ಣಗೆ ಕತ್ತರಿಸಿದ ಶುಂಠಿ ತುಂಡು, ಕತ್ತರಿಸಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕಾಳುಮೆಣಸು, ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಅದಕ್ಕೆ ರವೆಯನ್ನು ಬೆರೆಸಿ. ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ. ರವೆ ಸ್ವಲ್ಪ ಮೃದುವಾಗುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ರವೆ ಕುದಿಯುವ ಹಂತಕ್ಕೆ ಬಂದಾಗ ಕೂಡಲೇ ಒಲೆಯನ್ನು ಆಫ್ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಮಿಶ್ರಣ ಸ್ವಲ್ಪ ತಣ್ಣಗಾದ ನಂತರ ಸಣ್ಣ ಉಂಡೆಗಳಾಗಿ ತೆಗೆದುಕೊಂಡು ವಡೆಗಳನ್ನಾಗಿ ಮಾಡಿ ಬಿಸಿ ಎಣ್ಣೆಯಲ್ಲಿ ಕರಿದರೆ ರವೆ ವಡೆ ರೆಡಿ.