ಸಜ್ಜಿಗೆ ರೊಟ್ಟಿ ಅಥವಾ ರವೆ ರೊಟ್ಟಿ ಕರ್ನಾಟಕದ ಜನಪ್ರಿಯ ಮತ್ತು ಆರೋಗ್ಯಕರ ಉಪಾಹಾರವಾಗಿದೆ. ಇದನ್ನು ರವೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಸುಲಭವಾಗಿ ಜೀರ್ಣವಾಗುವಂತಹ ಈ ರೊಟ್ಟಿ ಆರೋಗ್ಯವಂತ ಮತ್ತು ಸಾತ್ವಿಕ ಆಹಾರಕ್ಕೆ ಉತ್ತಮ ಆಯ್ಕೆ. ಚಟ್ನಿ ಅಥವಾ ತುಪ್ಪದ ಜೊತೆ ಇದನ್ನು ಅವಿದರೆ ಅದ್ಭುತ.
ಬೇಕಾಗುವ ಪದಾರ್ಥಗಳು:
ಸಜ್ಜಿಗೆ (ರವೆ/ಸೂಜಿ) – 1 ಕಪ್
ತುರಿದ ತಾಜಾ ತೆಂಗಿನಕಾಯಿ – ¼ ಕಪ್
ಜೀರಿಗೆ – ½ ಟೀ ಸ್ಪೂನ್
ಹಸಿಮೆಣಸು – 2-3
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಿದ್ದಷ್ಟು
ಕರಿಬೇವು – ೪ ಎಲೆ
ಎಣ್ಣೆ – ಕರಿಯಲು
ತಯಾರಿಸುವ ವಿಧಾನ:
ಒಂದು ದೊಡ್ಡ ಬಟ್ಟಲಲ್ಲಿ ಸಜ್ಜಿಗೆ, ತುರಿದ ತೆಂಗಿನಕಾಯಿ, ಹಸಿಮೆಣಸು, ಜೀರಿಗೆ, ಕತ್ತರಿಸಿದ ಕರಿಬೇವು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಮೃದುವಾದ ಹಿಟ್ಟಾಗಿ ಕಲಸಿ. ಇದನ್ನು 10 ನಿಮಿಷ ಬಿಡಿ.
ಪ್ಲಾಸ್ಟಿಕ್ ಹಾಳೆ ಮೇಲೆ ಸ್ವಲ್ಪ ಎಣ್ಣೆ ಹಚ್ಚಿ ರವೆ ಹಿಟ್ಟನ್ನು ವೃತ್ತಾಕಾರವಾಗಿ ತಟ್ಟಿ ಕಾವಲಿಯ ಮೇಲೆ ಎರಡು ಬದಿ ಬೇಯಿಸಿದರೆ ಸಜ್ಜಿಗೆ ರೊಟ್ಟಿ ರೆಡಿ.