Sunday, December 21, 2025

FOOD | ಸಿಂಪಲ್ & ಟೇಸ್ಟಿ ಮೂಲಂಗಿ ಪಲ್ಯ: ನಮ್ಮಮ್ಮನ ರೆಸಿಪಿ ಇದು! ನೀವೂ ಟ್ರೈ ಮಾಡಿ

ಪ್ರತಿದಿನ ಊಟಕ್ಕೆ ಒಂದೇ ರೀತಿಯ ತರಕಾರಿ ಪಲ್ಯ ತಿಂದು ಬೇಸರವಾಗಿದೆಯಾ? ಅಂಥ ಸಮಯದಲ್ಲಿ ಕಡಿಮೆ ಪದಾರ್ಥಗಳಲ್ಲಿ ಬೇಗನೆ ತಯಾರಾಗುವ ಮೂಲಂಗಿ ಪಲ್ಯ ಬೆಸ್ಟ್. ಜೀರ್ಣಕ್ರಿಯೆಗೆ ಸಹಕಾರಿ, ಶೀತ ನಿವಾರಕ ಹಾಗೂ ಫೈಬರ್‌ ಸಮೃದ್ಧವಾಗಿರುವ ಈ ಮೂಲಂಗಿ ಪಲ್ಯ ಅನ್ನ ಅಥವಾ ರೊಟ್ಟಿಯ ಜೊತೆಗೆ ತುಂಬಾ ಚೆನ್ನಾಗಿ ಹೊಂದುತ್ತದೆ.

ಬೇಕಾಗುವ ಪದಾರ್ಥಗಳು:

ಮೂಲಂಗಿ – 2 ಮಾಧ್ಯಮ ಗಾತ್ರದ್ದು (ಸಣ್ಣ ತುಂಡುಗಳಾಗಿ ಕತ್ತರಿಸಿದವು)
ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ)
ಹಸಿಮೆಣಸಿನಕಾಯಿ – 2 (ಸಣ್ಣಗೆ ಕತ್ತರಿಸಿದ)
ಸಾಸಿವೆ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಕಡಲೆಬೇಳೆ – 1 ಟೀಸ್ಪೂನ್
ಉದ್ದಿನಬೇಳೆ – 1 ಟೀಸ್ಪೂನ್
ಕರಿಬೇವು – ಸ್ವಲ್ಪ
ಅರಿಶಿನ ಪುಡಿ – ¼ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ – 1 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ:

ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಸಿಡಿಸಿದ ನಂತರ ಜೀರಿಗೆ ಸೇರಿಸಿ. ಬಳಿಕ ಕಡಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಈಗ ಕರಿಬೇವು, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಈರುಳ್ಳಿ ಸ್ವಲ್ಪ ಮೃದುವಾಗುವವರೆಗೆ ಬೇಯಿಸಿ. ನಂತರ ಅರಿಶಿನ ಪುಡಿ ಹಾಗೂ ಕತ್ತರಿಸಿದ ಮೂಲಂಗಿಯನ್ನು ಹಾಕಿ. ಸ್ವಲ್ಪ ನೀರು ಹಾಕಿ ಮುಚ್ಚಿ ಕಡಿಮೆ ಉರಿಯಲ್ಲಿ ಮೂಲಂಗಿ ಮೃದುವಾಗುವವರೆಗೆ ಬೇಯಿಸಿ. ಕೊನೆಯಲ್ಲಿ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ, ಮೇಲಿಂದ ಕೊತ್ತಂಬರಿ ಸೊಪ್ಪು ಹಾಕಿ.

error: Content is protected !!