FOOD | ನಾನ್‌ವೆಜ್ ಪ್ರಿಯರ ಸ್ನ್ಯಾಕ್ ಆಪ್ಷನ್, ಪ್ರಾನ್ಸ್ ಪಕೋಡಾ! ಬಿಸಿ ಕಾಫಿ ಜೊತೆ ಬೆಸ್ಟ್ ಕಾಂಬಿನೇಶನ್

ನಾನ್‌ವೆಜ್ ಪ್ರಿಯರೊಳಗೆ ಸಿಗಡಿ (Prawns) ಬಹುಮಾನ್ಯವಾದ ಒಂದು ಆಹಾರ. ಇದು ಆರೋಗ್ಯಕರ ಹಾಗೂ ಸುಲಭವಾಗಿ ಜೀರ್ಣವಾಗುವ ಮಾಂಸದ ಪ್ರಕಾರವಾಗಿದೆ. ಸಾಮಾನ್ಯವಾಗಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸಿಗಡಿ ವಿಶೇಷವಾಗಿ ಉಪಯೋಗವಾಗುತ್ತದೆ. ಮಂಗಳೂರಿನಲ್ಲಿ ಗಂಜಿ ಜೊತೆ ಇದನ್ನು ಸೇವಿಸುವುದು ಜನಪ್ರಿಯ. ಇವತ್ತು ನಾವು ತುಂಬಾ ಸುಲಭವಾಗಿ ಪ್ರಾನ್ಸ್ ಪಕೋಡಾ ಮಾಡೋದು ಹೇಗೆ ಅಂತ ನೋಡೋಣ.

ಬೇಕಾಗುವ ಪದಾರ್ಥಗಳು:

ತಾಜಾ ಸಿಗಡಿ – ½ ಕೆಜಿ
ಕಡಲೆ ಹಿಟ್ಟು – 1 ಕಪ್
ಕಾರ್ನ್ ಫ್ಲೋರ್ – 1 ಟೀಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಮೆಣಸಿನ ಪುಡಿ – ½ ಟೀಸ್ಪೂನ್
ಗರಂ ಮಸಾಲ – ¼ ಟೀಸ್ಪೂನ್
ಚಾಟ್ ಮಸಾಲ – ½ ಟೀಸ್ಪೂನ್
ಅಡುಗೆ ಸೋಡಾ – ಒಂದು ಚಿಟಿಕೆ
ಈರುಳ್ಳಿ ಎಲೆ – 1 ಕಪ್ (ಸಣ್ಣದಾಗಿ ಕತ್ತರಿಸಿತ್ತಿರಲಿ)
ಹಸಿಮೆಣಸು – 2
ಕರಿಬೇವು – ಒಂದು ಮುಷ್ಟಿ
ಕೊತ್ತಂಬರಿ ಸೊಪ್ಪು – 1 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಹುರಿಯಲು ಬೇಕಾದಷ್ಟು

ತಯಾರಿಸುವ ವಿಧಾನ:

ಸಿಗಡಿಯನ್ನು ಚೆನ್ನಾಗಿ ತೊಳೆದು ಸ್ವಲ್ಪ ಹೊತ್ತು ಬೇಯಿಸಿ. ಈಗ ಒಂದು ದೊಡ್ಡ ಪಾತ್ರೆಯಲ್ಲಿ ಈರುಳ್ಳಿ ಎಲೆ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಮೆಣಸಿನ ಪುಡಿ, ಚಾಟ್ ಮಸಾಲ, ಉಪ್ಪು, ಅಡುಗೆ ಸೋಡಾ, ಕಡಲೆ ಹಿಟ್ಟು ಹಾಗೂ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಸ್ವಲ್ಪ ನೀರು ಸೇರಿಸಿ ಪಕೋಡಾ ಹಿಟ್ಟಿನಂತಹ ಪೇಸ್ಟ್ ತಯಾರಿಸಿ. ಹಿಟ್ಟಿಗೆ ಕೊನೆಗೆ ಸಿಗಡಿಯನ್ನು ಹಾಕಿ ಮಿಶ್ರಣ ಮಾಡಿ. ಅರ್ಧ ಗಂಟೆ ಬಿಡಿ.

ನಂತರ, ಒಂದು ಪ್ಯಾನಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಸಿಗಡಿಯನ್ನು ಹಾಕಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿದರೆ ಪ್ರಾನ್ಸ್ ಪಕೋಡಾ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!