ಕಡ್ಲೆಕಾಳು ಹುಸ್ಲಿ ಬೆಳಗಿನ ಉಪಹಾರಕ್ಕೆ ಅಥವಾ ಸಂಜೆ ಲಘು ಉಪಹಾರಕ್ಕೆ ಬಹಳ ರುಚಿಕರ ಮತ್ತು ಪೌಷ್ಟಿಕ ಆಹಾರವಾಗಿದೆ. ಇದನ್ನು ತಯಾರಿಸಲು ಕಡಿಮೆ ಸಮಯ ಬೇಕು ಮತ್ತು ಸರಳವಾಗಿ ಮಾಡಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
ಕಡ್ಲೆಕಾಳು – 1 ಕಪ್
ಎಳ್ಳು – 1 ಟೀ ಚಮಚ
ಹಸಿಮೆಣಸು – 2 (ಸಣ್ಣ ತುಂಡುಗಳಾಗಿ ಕತ್ತರಿಸಿ)
ಇಂಗು – ಚಿಟಿಕೆ
ಕರಿಬೇವು – 1 ಎಸಳು
ತೆಂಗಿನ ತುರಿ – 2 ಟೇಬಲ್ ಚಮಚ
ನಿಂಬೆಹಣ್ಣಿನ ರಸ – 1 ಟೇಬಲ್ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಟೇಬಲ್ ಚಮಚ
ಸಾಸಿವೆ – ½ ಟೀ ಚಮಚ
ಮಾಡುವ ವಿಧಾನ:
ಮೊದಲಿಗೆ ಕಡ್ಲೆಕಾಳುಗಳನ್ನು ರಾತ್ರಿ ನೆನೆಸಿಟ್ಟು, ಬೆಳಗ್ಗೆ ಕುಕ್ಕರ್‌ನಲ್ಲಿ ಹಾಕಿ ೩ರಿಂದ ೪ ವಿಸಿಲ್ ಕೂಗಿಸಿ.
ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಸಾಸಿವೆ, ಹಸಿಮೆಣಸು, ಇಂಗು, ಮತ್ತು ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿ. ಈಗ ಬೇಯಿಸಿದ ಕಡ್ಲೆಕಾಳು, ಉಪ್ಪು ಸೇರಿಸಿ 2–3 ನಿಮಿಷ ಹುರಿಯಿರಿ. ನಂತರ ತೆಂಗಿನ ತುರಿ ಹಾಕಿ ಮಿಶ್ರಣ ಮಾಡಿ. ಕೊನೆಗೆ ನಿಂಬೆಹಣ್ಣಿನ ರಸವನ್ನು ಹಾಕಿ ಮಿಶ್ರಣ ಮಾಡಿದರೆ ಕಡ್ಲೆಕಾಳು ಹುಸ್ಲಿ ರೆಡಿ.