FOOD | ಊಟಕ್ಕೆ ಸ್ಪೆಷಲ್ ಸೈಡ್ ಡಿಶ್ ದಹಿ ಭಿಂಡಿ! ರೆಸಿಪಿ ಇಲ್ಲಿದೆ

ಒಂದು ವಿಭಿನ್ನ ಮತ್ತು ರುಚಿಕರ ಸೈಡ್ ಡಿಶ್ ಬೇಕೆ? ಹಾಗಾದ್ರೆ ಈ ದಹಿ ಭಿಂಡಿ ಉತ್ತಮ ಆಯ್ಕೆ. ಮೊಸರು, ಸಾಸಿವೆ, ಈರುಳ್ಳಿ ಮತ್ತು ಮಸಾಲೆಯೊಂದಿಗೆ ತಯಾರಾಗುವ ಈ ಭಿಂಡಿ ಕರಿಯು ಚಪಾತಿ ಅಥವಾ ಅನ್ನ ಜತೆ ಹೆಚ್ಚು ಚೆನ್ನಾಗಿ ಹೊಂದುತ್ತದೆ.

ಬೇಕಾಗುವ ಪದಾರ್ಥಗಳು:

250 ಗ್ರಾಂ ಬೆಂಡೆಕಾಯಿ
1 ಈರುಳ್ಳಿ,
1 ಕಪ್ ಮೊಸರು
1 ಟೀಸ್ಪೂನ್ ಕಡಲೆ ಹಿಟ್ಟು
1 ಒಣ ಮೆಣಸಿನಕಾಯಿ
4-5 ಕರಿಬೇವು ಎಲೆಗಳು
1/2 ಟೀಸ್ಪೂನ್ ಜೀರಿಗೆ
1/4 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಕೊತ್ತಂಬರಿ ಪುಡಿ
1 ಚಿಟಿಕೆ ಅರಿಶಿನ ಪುಡಿ
1½ ಚಮಚ + 2 ಚಮಚ ಎಣ್ಣೆ
1 ಚಮಚ ಕೊತ್ತಂಬರಿ ಸೊಪ್ಪು
1/2 ಕಪ್ ನೀರು
ಉಪ್ಪು

ಮಾಡುವ ವಿಧಾನ

ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒಣಗಿಸಿ. ತಲೆ ಮತ್ತು ಬಾಲ ಭಾಗವನ್ನು ತೆಗೆದು, ಸುಮಾರು ಅರ್ಧ ಇಂಚಿನ ವೃತ್ತಗಳಾಗಿ ಕತ್ತರಿಸಿ. ಒಂದು ಪ್ಯಾನ್‌ನಲ್ಲಿ 1½ ಟೀ ಚಮಚ ಎಣ್ಣೆ ಬಿಸಿ ಮಾಡಿ. ಇದರಲ್ಲಿ ಕತ್ತರಿಸಿದ ಬೆಂಡೆಕಾಯಿ ಹಾಕಿ, ಮಧ್ಯಮ ಉರಿಯಲ್ಲಿ 8-10 ನಿಮಿಷ ಹುರಿದಿಟ್ಟುಕೊಳ್ಳಿ.

ಈಗ ಒಂದು ಬೌಲ್ ಗೆ ಮೊಸರು ಮತ್ತು ಕಡಲೆ ಹಿಟ್ಟನ್ನು ½ ಕಪ್ ನೀರಿನಲ್ಲಿ ಬೆರೆಸಿ ನಯವಾಗಿ, ಗುಟ್ಟಾಗದಂತೆ ಚೆನ್ನಾಗಿ ಕಲಸಿ.

ಒಂದು ಬಾಣಲೆಗೆ 2 ಟೀ ಚಮಚ ಎಣ್ಣೆ ಹಾಕಿ. ಸಾಸಿವೆ ಮತ್ತು ಜೀರಿಗೆ ಹಾಕಿ. ಸಿಡಿದ ನಂತರ ಈರುಳ್ಳಿ, ಕರಿಬೇವು, ಒಣ ಮೆಣಸಿನಕಾಯಿ ಹಾಕಿ. ಈರುಳ್ಳಿ ತಿಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಈಗ ಅದಕ್ಕೆ ಮೊಸರು-ಕಡಲೆ ಹಿಟ್ಟು ಮಿಶ್ರಣ, ಕೊತ್ತಂಬರಿ ಪುಡಿ, ಅರಿಶಿನ ಪುಡಿ ಮತ್ತು ಉಪ್ಪು ಹಾಕಿ 2 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.

ಕೊನೆಗೆ ಹುರಿದ ಬೆಂಡೆಕಾಯಿಯನ್ನು ಮಿಶ್ರಣಕ್ಕೆ ಸೇರಿಸಿ. ಇನ್ನೂ 4-5 ನಿಮಿಷ ಬೇಯಿಸಿ. ಉರಿಯನ್ನು ಆಫ್ ಮಾಡಿದರೆ ದಹಿ ಭಿಂಡಿ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!