ಅನೇಕ ಜನರಿಗೆ ಅನ್ನದ ಐಟಂಗಳು ತುಂಬಾ ಪ್ರಿಯ. ಬೆಳಿಗ್ಗೆ ಉಪಾಹಾರಕ್ಕೂ, ಮಕ್ಕಳ ಲಂಚ್ ಬಾಕ್ಸ್‌ಗೂ ರೈಸ್ ಐಟಂಗಳನ್ನು ಮಾಡುವುದು ಸುಲಭ ಹಾಗೂ ರುಚಿಕರ. ಇವತ್ತು ಕಲರ್‌ಫುಲ್ ಮತ್ತು ಆರೋಗ್ಯಕರ ಪಾಲಕ್ ರೈಸ್ ಮಾಡುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ.
ಬೇಕಾಗುವ ಸಾಮಗ್ರಿಗಳು:
ಅನ್ನ – 1 ಬೌಲ್
ಬೇಯಿಸಿದ ಪಾಲಕ್ ಸೊಪ್ಪು – ½ ಕಪ್
ಕರಿಬೇವು – ಸ್ವಲ್ಪ
ಚೆಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ – ಅಗತ್ಯಕ್ಕೆ
ಜೀರಿಗೆ – ½ ಟೀ ಸ್ಪೂನ್
ಅರಶಿಣ – ½ ಟೀ ಸ್ಪೂನ್
ಹಸಿರು ಮೆಣಸಿನಕಾಯಿ – 3
ಉದ್ದ ಹೆಚ್ಚಿದ ಈರುಳ್ಳಿ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ಬೇಯಿಸಿದ ಪಾಲಕ್ ಸೊಪ್ಪನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಪೇಸ್ಟ್ ಮಾಡಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಜೀರಿಗೆ, ಪಲಾವ್ ಎಲೆ, ಚೆಕ್ಕೆ, ಲವಂಗ ಹಾಗೂ ಏಲಕ್ಕಿ ಹಾಕಿ ಫ್ರೈ ಮಾಡಿ. ಬಳಿಕ ಅದಕ್ಕೆ ಕರಿಬೇವು, ಉದ್ದ ಹೆಚ್ಚಿದ ಹಸಿರು ಮೆಣಸಿನಕಾಯಿ, ಈರುಳ್ಳಿ ಸೇರಿಸಿ ಚೆನ್ನಾಗಿ ಕರಿಯಿರಿ.
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಈಗ ಪಾಲಕ್ ಪೇಸ್ಟ್ ಸೇರಿಸಿ, ಉಪ್ಪು ಮತ್ತು ಅರಶಿಣ ಹಾಕಿ ಫ್ರೈ ಮಾಡಿ. ಇದಕ್ಕೆ 2 ಚಮಚ ನೀರು ಹಾಕಿ ಎಣ್ಣೆ ಬಿಡುವವರೆಗೆ ಕುದಿಸಿ. ಕೊನೆಯಲ್ಲಿ ಅನ್ನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.