Thursday, September 25, 2025

FOOD | ಆರೋಗ್ಯಕರ ತರಕಾರಿ ಗಂಜಿ ಸವಿದು ನಿಮ್ಮ ದಿನ ಪ್ರಾರಂಭಿಸಿ!

ಬೆಳಿಗ್ಗೆ ದಿನವನ್ನು ಪ್ರಾರಂಭಿಸುವಾಗ ಹೊಟ್ಟೆಗೆ ಹಿತಕರವಾಗಿಯೂ, ಪೌಷ್ಟಿಕಾಂಶ ತುಂಬಿದ ಆಹಾರವನ್ನು ಸೇವಿಸಿದರೆ ದಿನವಿಡೀ ಉತ್ಸಾಹದಿಂದ ಕಳೆಯಬಹುದು. ವಿಶೇಷವಾಗಿ ತರಕಾರಿಗಳಿಂದ ಮಾಡಿದ ಗಂಜಿ ಆರೋಗ್ಯಕರವಾಗಿದ್ದು, ಜೀರ್ಣಕ್ರಿಯೆಗೂ ಸಹಾಯಕ. ಇವತ್ತು ನಾವು ನಿಮಗೆ ಟೇಸ್ಟಿ ತರಕಾರಿ ಗಂಜಿ ಮಾಡುವ ವಿಧಾನ ಹೇಗೆ ಅಂತ ನೋಡೋಣ.

ಬೇಕಾಗುವ ಪದಾರ್ಥಗಳು:

ನೆನೆಸಿದ ಅಕ್ಕಿ – 1 ಕಪ್
ನೆನೆಸಿದ ಹೆಸರು ಬೇಳೆ – ¼ ಕಪ್
ಈರುಳ್ಳಿ – 1
ಟೊಮೆಟೋ – 1
ಕ್ಯಾರೆಟ್ – 1
ಬೀನ್ಸ್ – 5
ಆಲೂಗಡ್ಡೆ – 1
ಬಟಾಣಿ – 1 ಟೀಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಗರಂ ಮಸಾಲೆ – 1 ಟೀಸ್ಪೂನ್
ಅರಿಶಿನ ಪುಡಿ – ½ ಟೀಸ್ಪೂನ್
ಮೊಸರು – ¼ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ – 2 ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು, ಪುದೀನಾ – ಸ್ವಲ್ಪ
ನೀರು – 4 ಕಪ್

ಮಾಡುವ ವಿಧಾನ:

ಮೊದಲು ಕುಕ್ಕರ್‌ನಲ್ಲಿ ಅಕ್ಕಿ ಮತ್ತು ಹೆಸರು ಬೇಳೆ, ಈರುಳ್ಳಿ, ಟೊಮೆಟೋ, ಪುದೀನಾ, ಕೊತ್ತಂಬರಿ ಹಾಗೂ ಎಲ್ಲಾ ತರಕಾರಿಗಳನ್ನು ಸೇರಿಸಿ. ಜೊತೆಗೆ ಮೆಣಸಿನ ಪುಡಿ, ಅರಿಶಿನ, ಗರಂ ಮಸಾಲೆ, ಮೊಸರು ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, 4 ಕಪ್ ನೀರು ಸೇರಿಸಿ, ಕುಕ್ಕರ್‌ನ ಮುಚ್ಚಳ ಹಾಕಿ 5-6 ಸೀಟಿ ಬರುವವರೆಗೆ ಬೇಯಿಸಿ.

ತಣ್ಣಗಾದ ನಂತರ ಮಿಶ್ರಣವನ್ನು ಸ್ವಲ್ಪ ಮ್ಯಾಶ್ ಮಾಡಿ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಜೀರಿಗೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ. ಅದನ್ನು ಗಂಜಿಗೆ ಸೇರಿಸಿ, 5 ನಿಮಿಷ ಬಿಸಿ ಮಾಡಿದರೆ ತರಕಾರಿ ಗಂಜಿ ರೆಡಿ.

ಇದನ್ನೂ ಓದಿ