Sunday, October 12, 2025

FOOD | ಭಾನುವಾರದ ವಿಶೇಷ ಗೊಜ್ಜವಲಕ್ಕಿ! ನೀವೂ ಒಮ್ಮೆ ಟ್ರೈ ಮಾಡಿ

ಭಾನುವಾರ ಬಂತು ಅಂದರೆ ಮನೆಯಲ್ಲೇ ವಿಶ್ರಾಂತಿಯ ವಾತಾವರಣ. ಈ ದಿನ ಬೆಳಗ್ಗೆ ಬೇಗ ಏಳಬೇಕಿಲ್ಲ, ಆದರೆ ರುಚಿ ರುಚಿಯಾದ ತಿಂಡಿ ಬೇಕು ಎನ್ನುವುದು ಎಲ್ಲರಿಗೂ ಸಾಮಾನ್ಯ. ವಿಶೇಷವಾಗಿ ಮಕ್ಕಳು ಬಿಸಿ ಬಿಸಿ ತಿಂಡಿ ಕೇಳುತ್ತಿರುತ್ತಾರೆ. ಪ್ರತೀ ಸಲ ಅವಲಕ್ಕಿ ಉಪ್ಮಾ ಮಾಡೋದು ಬೇಸರವಾಗುತ್ತದೆಯೇ? ಹಾಗಾದರೆ ಈ ಸಲ ಟ್ರೈ ಮಾಡಿ ಗೊಜ್ಜವಲಕ್ಕಿ! ಇದು ಸಿಹಿ, ಹುಳಿ, ಖಾರದ ಸವಿಯ ಸುಂದರ ಮಿಶ್ರಣವಾಗಿದ್ದು, ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು:

ದಪ್ಪ ಅವಲಕ್ಕಿ (ನೆನೆಸಿದದ್ದು) – 1 ಕಪ್
ಸಾಂಬಾರು ಪುಡಿ – 2 ಚಮಚ
ಬೆಲ್ಲ – 4 ಚಮಚ
ಸಾಸಿವೆ – 1 ಚಮಚ
ಉದ್ದಿನ ಬೇಳೆ – ½ ಚಮಚ
ಕರಿಬೇವು – 3–4 ದಳ
ಹುಣಸೇ ಹಣ್ಣಿನ ರಸ – 6 ಚಮಚ
ಕಡಲೆ ಬೀಜ ಮತ್ತು ಗೋಡಂಬಿ – ತುರಿಯಲು ಬೇಕಾದಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ

ಮಾಡುವ ವಿಧಾನ:

ಮೊದಲು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಉದ್ದಿನ ಬೇಳೆ, ಸಾಸಿವೆ, ಕಡಲೆ ಬೀಜ, ಗೋಡಂಬಿ ಹಾಗೂ ಕರಿಬೇವು ಹಾಕಿ ಹುರಿಯಿರಿ. ಈಗ ಅದಕ್ಕೆ ಹುಣಸೆ ರಸ, ಬೆಲ್ಲ, ಉಪ್ಪು ಹಾಗೂ ಸಾಂಬಾರು ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಮಿಶ್ರಣ ಸ್ವಲ್ಪ ಕುದಿಯಲು ಬಿಡಿ. ರಸ ಗಟ್ಟಿಯಾದಾಗ ಅದಕ್ಕೆ ನೆನೆಸಿದ ಅವಲಕ್ಕಿ ಸೇರಿಸಿ. ನಿಧಾನವಾಗಿ ಕಲಸಿ, 2 ನಿಮಿಷ ಕಡಿಮೆ ಉರಿಯಲ್ಲಿ ಹುರಿದುಕೊಂಡರೆ ರುಚಿಯಾದ ಗೊಜ್ಜವಲಕ್ಕಿ ರೆಡಿ!

error: Content is protected !!