ಡ್ರೈ ಭಿಂಡಿ ಮಸಾಲ ಒಂದು ರುಚಿಕರವಾದ ಮತ್ತು ಆರೋಗ್ಯಕರ ಪಲ್ಯ. ಕಡಿಮೆ ಎಣ್ಣೆಯಲ್ಲಿ, ಸುಲಭವಾಗಿ ತಯಾರಿಸಬಹುದಾದ ಈ ಪಲ್ಯ ಅನ್ನದ ಜೊತೆಗೆ ಅಥವಾ ಚಪಾತಿ-ರೊಟ್ಟಿಗೆಗೂ ಅತ್ಯುತ್ತಮವಾಗಿ ಆಯ್ಕೆ.
ಬೇಕಾಗುವ ಪದಾರ್ಥಗಳು
250 ಗ್ರಾಂ ಬೆಂಡೆಕಾಯಿ
1 ಈರುಳ್ಳಿ, ನುಣ್ಣಗೆ ಕತ್ತರಿಸಿದ್ದು
2 ಟೀ ಚಮಚ ಜೀರಿಗೆ-ಕೊತ್ತಂಬರಿ ಪುಡಿ
1/4 ಟೀಸ್ಪೂನ್ ಅರಿಶಿನ ಪುಡಿ
1/2 ಟೀಸ್ಪೂನ್ ಗರಂ ಮಸಾಲಾ
1 ಚಮಚ ತುರಿದ ತೆಂಗಿನಕಾಯಿ
1-2 ಹಸಿರು ಮೆಣಸಿನಕಾಯಿ
1 ಟೀಚಮಚ ಶುಂಠಿ, ನುಣ್ಣಗೆ ಕತ್ತರಿಸಿದ್ದು
4 ಬೆಳ್ಳುಳ್ಳಿ ಲವಂಗ
1/2 ಟೀಸ್ಪೂನ್ ಜೀರಿಗೆ
2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು
1½ ಚಮಚ ಎಣ್ಣೆ
ಉಪ್ಪು
ಮಾಡುವ ವಿಧಾನ:
ಮೊದಲಿಗೆ ಬೆಂಡೆಕಾಯಿಯನ್ನು ನೀರಿನಲ್ಲಿ ತೊಳೆದು ಬಟ್ಟೆಯಿಂದ ಒಣಗಿಸಿ. ಅವು ಸಂಪೂರ್ಣವಾಗಿ ಒಣಗಿದ ಮೇಲೆ ಅದನ್ನು ಉದ್ದವಾಗಿ ಕತ್ತರಿಸಿ ಇಟ್ಟುಕೊಳ್ಳಿ.
ಈಗ ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ನುಣ್ಣಗೆ ಪುಡಿಮಾಡಿ ಖಾರವಾದ ಶುಂಠಿ-ಬೆಳ್ಳುಳ್ಳಿ-ಮೆಣಸಿನಕಾಯಿ ಪೇಸ್ಟ್ ರೆಡಿ ಮಾಡಿ.
ಒಂದು ಬಾಣಲೆಯಲ್ಲಿ 1½ ಚಮಚ ಎಣ್ಣೆ ಹಾಕಿ. ಕತ್ತರಿಸಿದ ಭಿಂಡಿಯನ್ನು ಮಧ್ಯಮ ಉರಿಯಲ್ಲಿ ಸುಮಾರು 6-8 ನಿಮಿಷಗಳ ಕಾಲ ಹುರಿಯಿರಿ. ಅದರ ಮೇಲೆ ಸ್ವಲ್ಪ ಉಪ್ಪು ಹಾಕಿ ಒಂದು ನಿಮಿಷ ಬೇಯಿಸಿ. ಉರಿಯನ್ನು ಆಫ್ ಮಾಡಿ ತಟ್ಟೆಗೆ ವರ್ಗಾಯಿಸಿ.
ಅದೇ ಬಾಣಲೆಗೆ 2 ಚಮಚ ಎಣ್ಣೆ ಹಾಕಿ, ಜೀರಿಗೆ ಹಾಕಿ, ನಂತರ ಹಸಿರು ಮೆಣಸಿನಕಾಯಿ-ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಜೊತೆಗೆ ಅರಿಶಿನ ಪುಡಿ ಮತ್ತು ಗರಂ ಮಸಾಲ ಹಾಕಿ ಒಂದು ನಿಮಿಷ ಹುರಿಯಿರಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಉಪ್ಪು ಹಾಕಿ ಈರುಳ್ಳಿ ತಿಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ತುರಿದ ತೆಂಗಿನಕಾಯಿ, ಜೀರಿಗೆ-ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಫ್ರೈ ಮಾಡಿರುವ ಬೆಂಡೆಕಾಯಿ ಹಾಕಿ ಎಲ್ಲವನ್ನು ಮಿಕ್ಸ್ ಮಾಡಿದರೆ ಡ್ರೈ ಭಿಂಡಿ ಮಸಾಲ ರೆಡಿ.