ಮಳೆಗಾಲದ ಬೆಸ್ಟ್ ಫ್ರೆಂಡ್ ಈ ಬೇಬಿಕಾರ್ನ್ ಸೂಪ್! ನೀವೂ ಒಮ್ಮೆ ಟ್ರೈ ಮಾಡಿ
ಮಳೆಗಾಲದಲ್ಲಿ ಬಿಸಿ ಬಿಸಿ ಸೂಪ್ ಕುಡಿಯೋದು ಆರೋಗ್ಯಕ್ಕೂ ಹಿತಕರ ಹಾಗೂ ರುಚಿಕರ ಕೂಡ. ವಿವಿಧ ರೀತಿಯ ಸೂಪ್ ಗಳನ್ನು ನಾನು ಟೇಸ್ಟ್ ಮಾಡಿದ್ದೇವೆ. ಆದ್ರೆ ಇವತ್ತು ಬೇಬಿಕಾರ್ನ್ ಸೂಪ್ ಟ್ರೈ ಮಾಡಿದ್ದೀರಾ. ಇವತ್ತು ಬೇಬಿಕಾರ್ನ್ ಸೂಪ್ ಮಾದೋಡಿ ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು:
ಬೇಬಿಕಾರ್ನ್ – 8 ರಿಂದ 10
ಬೆಳ್ಳುಳ್ಳಿ – 4 ಕಲೆಗಳು
ಹಸಿರು ಮೆಣಸು – 1
ಸ್ಪ್ರಿಂಗ್ ಆನಿಯನ್ – 2 ಚಮಚ
ನೀರು – 2 ಕಪ್
ಕಾರ್ನ್ ಫ್ಲೋರ್ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸು ಪುಡಿ – ಸ್ವಲ್ಪ
ಸೋಯಾ ಸಾಸ್ – ½ ಚಮಚ
ಎಣ್ಣೆ – 1 ಚಮಚ
ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸು ಹಾಕಿ ಹುರಿಯಿರಿ. ನಂತರ ಬೇಬಿಕಾರ್ನ್ ಹಾಗೂ ಸ್ಪ್ರಿಂಗ್ ಆನಿಯನ್ ಹಾಕಿ 2-3 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಈಗ 2 ಕಪ್ ನೀರು ಸೇರಿಸಿ, ಬೋಗಿಹಾಕಿ 5 ನಿಮಿಷ ಕುದಿಸಿ. ನಂತರ ಕಾರ್ನ್ ಫ್ಲೋರ್ ಅನ್ನು 2 ಚಮಚ ನೀರಿನಲ್ಲಿ ಕರಗಿಸಿ, ಸೂಪ್ ಗೆ ಸೇರಿಸಿ.
ಕೊನೆಗೆ ಉಪ್ಪು, ಮೆಣಸು ಪುಡಿ, ಮತ್ತು ಸೋಯಾ ಸಾಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 2-3 ನಿಮಿಷ ಕುದಿಸಿ, ಸೂಪ್ ತಕ್ಕ ಗಾಢತೆ ಬಂದ ಮೇಲೆ ಗ್ಯಾಸ್ ನಿಂದ ಇಳಿಸಿ.